ಸರಗಳ್ಳತನ, ಮೊಬೈಲ್ ಕಳ್ಳತನ, ದರೋಡೆ ಇಂತಹ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಹೋಗ್ತಿದೆ. ಇತ್ತೀಚೆಗೆ ಸೋಶಿಯಲ್ಮೀಡಿಯಾದಲ್ಲಿ ಮೊಬೈಲ್ ಕಳ್ಳತನದ ಒಂದು ವಿಡಿಯೋ ವೈರಲ್ ಆಗಿದೆ. ಈ ವೈರಲ್ ಆಗಿರುವ ವಿಡಿಯೋ ಕ್ಲೈಮ್ಯಾಕ್ಸ್ ಮಾತ್ರ ಎಂಥವರನ್ನೂ ನಕ್ಕುನಕ್ಕು ಸುಸ್ತಾಗುವಂತೆ ಮಾಡುತ್ತೆ.
ಅಷ್ಟಕ್ಕೂ ಇಲ್ಲಿ ಆಗಿದ್ದು ಏನಂದ್ರೆ, ಇಲ್ಲಿ ಯುವತಿ ತನ್ನ ಪಾಡಿಗೆ ತಾನು ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗ್ತಾ ಇರ್ತಾಳೆ. ಸ್ಕೂಟಿಯಲ್ಲಿ ಬಂದ ಕಳ್ಳ ಆಕೆಯ ಮೊಬೈಲ್ ಕಸಿದುಕೊಂಡು, ಆಕೆಯನ್ನ ತಳ್ಳಿ, ಅಲ್ಲಿಂದ ಪರಾರಿಯಾಗುತ್ತಾನೆ.
ಶಾಕ್ನಲ್ಲಿದ್ದ ಯುವತಿ ಕಳ್ಳ ಕಳ್ಳ ಅಂತ ಕೂಗುತ್ತಾಳೆ. ತಕ್ಷಣವೇ ಅಲ್ಲಿದ್ದ ಇನ್ನೂ ಕೆಲ ಯುವಕರು ಕಳ್ಳನ ಸ್ಕೂಟಿಯನ್ನ ಬೆನ್ನತ್ತಿ ಹೋಗಿ ಕಳ್ಳನನ್ನ ಹಿಡಿದು ಸರಿಯಾಗಿ ಗುಮ್ಮಿದ್ದಾರೆ.
ಆ ನಂತರ ಆ ಕಳ್ಳನನ್ನ ಹಿಡಿದುಕೊಂಡು ಯುವತಿಯ ಬಳಿ ದರದರನೆ ಎಳೆದುಕೊಂಡು ಬಂದಿದ್ಧಾರೆ. ಆ ಮೊಬೈಲ್ ವಾಪಸ್ಸು ಕೊಟ್ಟ ಕಳ್ಳನನ್ನ ನೋಡಿ ಆ ಯುವತಿ ಏನು ಮಾತನಾಡಬೇಕೋ ಗೊತ್ತಾಗದಷ್ಟು ಗಾಬರಿಯಾಗಿದ್ದಾಳೆ. ಅಲ್ಲಿದ್ದವರು ಆಕೆಗೆ ಏನಾಯ್ತು ಅಂತ ಹೇಳಿದಾಗ ಆಕೆ ಈತ ತನ್ನ ಬಾಯ್ಫ್ರೆಂಡ್ ಅಂತ ಹೇಳಿದ್ಧಾಳೆ. ಆಗ ಅಲ್ಲಿದ್ದವರು ಏನು ಹೇಳ್ಬೇಕು ಅನ್ನೊದೇ ಗೊತ್ತಾಗದಂತೆ ಗರಬಡಿಸಿಕೊಂಡತ್ತಿದ್ದರು.
ಎರಡು ತಿಂಗಳ ಹಿಂದೆ ಅಪ್ಲೋಡ್ ಆಗಿರುವ ಈ ವಿಡಿಯೋ ಈಗ ವೈರಲ್ ಆಗ್ತಿದೆ. ಇದನ್ನ ತಮಾಷೆಗಾಗಿ ಚಿತ್ರೀಕರಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಏನೇ ಅನ್ನಿ ಕೆಲವೊಮ್ಮೆ ಜೀವನದಲ್ಲೂ ಇಂತಹ ತಮಾಷೆಯ ಘಟನೆಗಳು ಆಗಾಗ ಆಗುತ್ತಲೇ ಇರುತ್ತೆ.