ಚಿತ್ರದುರ್ಗ: ರಾಜ್ಯದ ಪ್ರತಿಷ್ಠಿತ ಮಠ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಶರಣರ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಸ್ವಾಮೀಜಿ ಸೇರಿ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗದ ಮುರುಘಾಮಠದಲ್ಲಿರುವ ಬಾಲಕಿಯರನ್ನು ಮಹಿಳಾ ವಾರ್ಡನ್, ಸ್ವಾಮೀಜಿಗಳಿಗೆ ಹಣ್ಣು ಕೊಟ್ಟು ಬನ್ನಿ ಎಂದು ಕಳುಹಿಸುತ್ತಿದ್ದರು. ತಮ್ಮ ಬಳಿ ಬಂದ ವಿದ್ಯಾರ್ಥಿನಿಯರನ್ನು ಸ್ವಾಮೀಜಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮತ್ತು ಬರುವಂತೆ ಮಾಡಿ ಅಪ್ರಾಪ್ತ ಮಕ್ಕಳ ಮೇಲೆ ಸ್ವಾಮಿಜಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದರು ಎಂದು ಹಲವು ಮಕ್ಕಳು ಆರೋಪಿಸಿದ್ದಾರೆ.
ಮೂರುವರೆ ವರ್ಷಗಳಿಂದ ಸ್ವಾಮೀಜಿ ದೌರ್ಜನ್ಯ ಹಾಗೂ ಮಠದವರ ಕಿರುಕುಳದಿಂದ ನೊಂದ ಮಕ್ಕಳು ಮೊದಲು ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ. ಆದರೆ ಸ್ವಾಮೀಜಿ ಹಾಗೂ ಮಠದ ವಿರುದ್ಧ ದೂರು ದಾಖಲಿಸಿಕೊಂಡಿಲ್ಲ. ಅಂತಿಮವಾಗಿ ಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆ ಮೊರೆ ಹೋಗಿದ್ದು, ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಮೈಸೂರಿನ ನಜಾರಾಬಾದ್ ಠಾಣೆಯಲ್ಲಿ ಡಾ.ಶಿವಮೂರ್ತಿ ಶರಣರು ಸೇರಿದಂತೆ ಮಠದ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮುರುಘಾಶ್ರೀ ಡಾ.ಶಿವಮೂರ್ತಿಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ವಾರ್ಡನ್ ರಶ್ಮಿ ವಿರುದ್ಧ ಅಪ್ರಾಪ್ರೆಯರನ್ನು ಸ್ವಾಮೀಜಿ ಬಳಿ ಕಳುಹಿಸುತ್ತಿದ್ದ ಆರೋಪ ಹಾಗೂ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ ಕೇಳಿಬಂದಿದೆ. ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಪ್ರಕರಣವನ್ನು ಚಿತ್ರದುರ್ಗದ ಕೋಟೆ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.