ಚೌತಿ ಹಬ್ಬಕ್ಕೆ ಇನ್ನು ಒಂದೇ ದಿನ ಬಾಕಿಯಿದೆ. ಆದಿಯಲ್ಲಿ ಪೂಜಿಸಲ್ಪಡುವ ಗಣೇಶನ ಪೂಜೆ, ಆರಾಧನೆಗೆ ತಯಾರಿ ನಡೆದಿದೆ. ಅನೇಕರು ಮನೆಗೆ ಗೌರಿ, ಗಣೇಶನ ಮೂರ್ತಿ ತಂದು ಪೂಜೆ ಮಾಡ್ತಾರೆ. ಮನೆಗೆ ಗಣಪತಿ ಮೂರ್ತಿ ತರುವ ವೇಳೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.
ಗಣೇಶ ಮೂರ್ತಿ ಖರೀದಿಗೆ ಹೋಗುವ ವೇಳೆ ಶುದ್ಧ ಹಾಗೂ ಹೊಸ ವಸ್ತ್ರವನ್ನು ಧರಿಸಿ ಹೋಗಿ. ಗಣಪತಿ ಸೊಂಡಿಲು ಎಡಕ್ಕಿರುವಂತೆ ನೋಡಿಕೊಳ್ಳಿ. ದೊಡ್ಡ ಸೊಂಡಿಲಿನ ಮೂರ್ತಿ ಬಹಳ ಶುಭಕರ.
ಮನೆಗೆ ಮೂರ್ತಿ ತಂದ ಮೇಲೆ ಬೆಳ್ಳಿ ಬಟ್ಟಲಿನ ಮೇಲೆ ಸ್ವಸ್ಥಿಕವನ್ನು ಬಿಡಿಸಿ ನಂತ್ರ ಅದ್ರ ಮೇಲೆ ಮೂರ್ತಿ ಇಡಿ. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತ್ರ ಪೂಜೆ ಬಗ್ಗೆ ಗಮನವಿರಲಿ. ಗಣೇಶನಿಗೆ ಪ್ರಿಯವಾದ ಸಿಹಿ ತಿಂಡಿಗಳನ್ನು ಅರ್ಪಿಸಿ. ಬೆಳಿಗ್ಗೆ ಹಾಗೂ ಸಂಜೆ ದೀಪ ಬೆಳಗಿ ಪೂಜೆ ಮಾಡಬೇಕು.
ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆ ನೀಡಿ. ರಾಸಾಯನಿಕ ಬಣ್ಣ ಬಳಿದ ಸುಂದರ ಗಣೇಶನ ಮೂರ್ತಿ ಎಲ್ಲರನ್ನು ಆಕರ್ಷಿಸುತ್ತದೆ. ಆದ್ರೆ ಅದು ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಪರಿಸರ ಸ್ನೇಹಿ ಗಣೇಶನಿಗೆ ಆಧ್ಯತೆ ನೀಡಿ.