ಬೋರ್ ವೆಲ್ ನಿಂದ ನೀರು ಹಾಗೂ ಬೆಂಕಿ ಏಕಕಾಲದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಬಕ್ಸ್ವಾಹಾ ಪ್ರದೇಶದ ಕಚ್ಚರ್ ಗ್ರಾಮದಲ್ಲಿ ಹ್ಯಾಂಡ್ ಪಂಪ್ನಿಂದ ನೀರು ಹಾಗೂ ಬೆಂಕಿ ಕಾಣಿಸಿಕೊಂಡಿರುವುದು ಗ್ರಾಮಸ್ಥರನ್ನು ಅಚ್ಚರಿಗೊಳಿಸಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಥಳೀಯ ಆಡಳಿತ ಮತ್ತು ಭೂವಿಜ್ಞಾನಿಗಳ ಪ್ರಕಾರ, ಘಟನೆಯು ಪವಾಡವಲ್ಲ ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣವಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳ ಪ್ರಕಾರ, ಶಾಲೆಯೊಂದರ ಬಳಿ ಕೈಪಂಪು ಅಳವಡಿಸಲಾಗಿದ್ದು, ಇಡೀ ಗ್ರಾಮದ ದಾಹ ನೀಗಿಸಲು ಕೇವಲ ಎರಡು ಬೋರ್ ವೆಲ್ ಗಳಿವೆ. ಇದೀಗ ಒಂದರಲ್ಲಿ ಬೆಂಕಿ ಉಗುಳುತ್ತಿರುವುದು ಗ್ರಾಮಸ್ಥರ ಆತಂಕವನ್ನು ಹೆಚ್ಚಿಸಿದೆ. ಈ ಬಗ್ಗೆ ಅದೇ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಆಡಳಿತ ಮಂಡಳಿ ಈ ಬಗ್ಗೆ ತನಿಖೆ ನಡೆಸುತ್ತಿದೆ.
ಸ್ಥಳೀಯ ನಿವಾಸಿ ನಾರಾಯಣ ಯಾದವ್ ಅವರ ಪ್ರಕಾರ, ಈ ಹಿಂದೆ ಬೋರ್ ವೆಲ್ ನಿಂದ ಖಾಲಿ ಬೆಂಕಿಯಷ್ಟೇ ಹೊರಬರುತ್ತಿತ್ತು. ಈಗ ಬೆಂಕಿ ಮತ್ತು ನೀರು ಎರಡೂ ಏಕಕಾಲದಲ್ಲಿ ಹೊರಬರುತ್ತಿವೆ. ಗ್ರಾಮದಲ್ಲಿ ಕುಡಿಯುವ ನೀರಿಗೆ ವಿಶೇಷ ವ್ಯವಸ್ಥೆ ಇಲ್ಲ. ಎರಡು ಕೈ ಪಂಪ್ಗಳು ಮಾತ್ರ ಇವೆ ಎಂದಿದ್ದಾರೆ.
ಇನ್ನು ಈ ಬಗ್ಗೆ ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ, ಮಿಥೇನ್ ಅನಿಲವು ನೆಲದಡಿಯಲ್ಲಿ ರೂಪುಗೊಳ್ಳುತ್ತದೆ ಮತ್ತು ಅದೇ ವಸ್ತುವು ಕೆಲವೊಮ್ಮೆ ನೀರಿನಿಂದ ಹೊರಬರುತ್ತದೆ. ಈ ವೇಳೆ ಈ ರೀತಿ ಉಂಟಾಗುತ್ತದೆ ಎಂದು ಹೇಳಲಾಗಿದೆ.