ಮೇಷ ರಾಶಿ
ಇಂದು ಸಾಂಸಾರಿಕ ವಿಷಯಗಳನ್ನು ಬಿಟ್ಟು ಆಧ್ಯಾತ್ಮಿಕತೆಯ ಕಡೆಗೆ ಗಮನ ಹರಿಸಲಿದ್ದೀರಿ. ರಹಸ್ಯ ವಿದ್ಯೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ. ಗಹನವಾದ ಚಿಂತನೆ ನಿಮಗೆ ಅಲೌಕಿಕ ಅನುಭೂತಿ ಮೂಡಿಸಲಿದೆ.
ವೃಷಭ ರಾಶಿ
ಗೃಹಸ್ಥ ಜೀವನ ಮತ್ತು ದಾಂಪತ್ಯದಲ್ಲಿ ಸುಖ-ಶಾಂತಿಯ ಅನುಭವವಾಗಲಿದೆ. ಕುಟುಂಬ ಸದಸ್ಯರು ಮತ್ತು ಆತ್ಮೀಯರೊಂದಿಗೆ ಭೋಜನ ಸವಿಯಲಿದ್ದೀರಿ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ಮಿಥುನ ರಾಶಿ
ನಿಮ್ಮ ಅಪೂರ್ಣ ಕಾರ್ಯಗಳು ಯಶಸ್ವಿಯಾಗಿ ಮುಕ್ತಾಯವಾಗಲಿವೆ. ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣವಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಲಾಭವಾಗಲಿದೆ.
ಕರ್ಕ ರಾಶಿ
ದಿನದ ಆರಂಭದಲ್ಲಿ ಉದ್ವೇಗ ಮತ್ತು ಚಿಂತೆ ಹೆಚ್ಚಾಗಿರುತ್ತದೆ. ಆರೋಗ್ಯ ಕೊಂಚ ಏರುಪೇರಾಗಬಹುದು. ಹೊಸ ಕಾರ್ಯವನ್ನು ಇಂದು ಆರಂಭಿಸಬೇಡಿ. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ.
ಸಿಂಹ ರಾಶಿ
ನಕಾರಾತ್ಮಕ ವಿಚಾರದಿಂದ ಹತಾಶೆ ಆವರಿಸಬಹುದು. ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆಯ ಅನುಭವವಾಗಲಿದೆ. ಮನೆಯಲ್ಲಿ ಜಗಳದ ವಾತಾವರಣ ಏರ್ಪಡಲಿದೆ.
ಕನ್ಯಾ ರಾಶಿ
ಸರಿಯಾಗಿ ವಿಚಾರ ಮಾಡದೇ ಯಾವುದೇ ತೀರ್ಮಾನ ಕೈಗೊಳ್ಳಬೇಡಿ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ನಿಮ್ಮದೇ. ಆರ್ಥಿಕ ಲಾಭವಾಗಲಿದೆ.
ತುಲಾ ರಾಶಿ
ಹಠಮಾರಿತನವನ್ನು ಬಿಟ್ಟು ಸಮಾಧಾನದಿಂದ ವರ್ತಿಸಿ. ಅತಿಯಾದ ಮಾತಿನಿಂದ ಯಾರೊಂದಿಗಾದರೂ ಜಗಳವಾಗಬಹುದು. ಮನಸ್ಸು ಗೊಂದಲಮಯವಾಗಿರುತ್ತದೆ.
ವೃಶ್ಚಿಕ ರಾಶಿ
ತನು-ಮನ ಖುಷಿಯಾಗಿ, ಪ್ರಫುಲ್ಲವಾಗಿರುತ್ತದೆ. ಕುಟುಂಬಸ್ಥರು ಮತ್ತು ಮಿತ್ರರೊಂದಿಗೆ ಉತ್ತಮ ಭೋಜನ, ಪ್ರವಾಸ ಯೋಗವಿದೆ. ಸಂಗಾತಿಯೊಂದಿಗೆ ಹೆಚ್ಚಿನ ಆತ್ಮೀಯತೆ ಮೂಡಲಿದೆ.
ಧನು ರಾಶಿ
ಇಂದು ನಿಮಗೆ ಕೊಂಚ ಕಷ್ಟದಾಯಕ ದಿನ. ಆರೋಗ್ಯ ಹದಗೆಡಬಹುದು. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಮನಸ್ಸಿಗೆ ಬೇಸರವಾಗಲಿದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ.
ಮಕರ ರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಲಾಭದಾಯಕ ದಿನ. ಮಿತ್ರರು, ಸಂಬಂಧಿಕರೊಂದಿಗೆ ಸುತ್ತಾಡಲು ತೆರಳಲಿದ್ದೀರಿ. ಮಂಗಳ ಕಾರ್ಯದಲ್ಲಿ ಭಾಗವಹಿಸಲಿದ್ದೀರಿ. ಮಿತ್ರರು ಮತ್ತು ಪತ್ನಿಯಿಂದ ಲಾಭವಿದೆ.
ಕುಂಭ ರಾಶಿ
ನಿಮ್ಮ ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುತ್ತವೆ. ಕಚೇರಿಯಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಹಿರಿಯರು ಮತ್ತು ಮೇಲಾಧಿಕಾರಿಗಳ ಕೃಪಾದೃಷ್ಟಿ ನಿಮ್ಮ ಮೇಲಿರುತ್ತದೆ.
ಮೀನ ರಾಶಿ
ನಕಾರಾತ್ಮಕ ವಿಚಾರಗಳಿಂದ ದೂರವಿರಿ. ಮಾನಸಿಕ ಅಸ್ವಸ್ಥತೆ ನಿಮ್ಮನ್ನು ಚಿಂತೆಗೀಡು ಮಾಡುತ್ತದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವರ್ತಿಸಿ.