ನೆರೆಯ ರಾಷ್ಟ್ರ ಪಾಕಿಸ್ತಾನ ಪ್ರವಾಹದ ಸುಳಿಗೆ ಸಿಲುಕಿದೆ. ಪಾಕಿಸ್ತಾನ ಸರ್ಕಾರ ದೇಶದಲ್ಲಿ ‘ರಾಷ್ಟ್ರೀಯ ತುರ್ತುಸ್ಥಿತಿ’ಯನ್ನು ಘೋಷಿಸಿದೆ. ಪ್ರವಾಹ ಪೀಡಿತ ಜನರ ಪುನರ್ವಸತಿಗೆ ಸಹಾಯ ಮಾಡಲು ದೇಣಿಗೆಗಳನ್ನು ಕೋರಿದೆ. ಪಾಕ್ ಪ್ರಧಾನಿ ಶಹಬಾಜ್ ಷರೀಫ್ ತಮ್ಮ ಬ್ರಿಟನ್ ಪ್ರವಾಸವನ್ನು ಸಹ ರದ್ದುಮಾಡಿದ್ದಾರೆ.
ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶಗಳು ಪ್ರವಾಹದಿಂದ ಸಂಪೂರ್ಣ ತತ್ತರಿಸಿ ಹೋಗಿವೆ. ಪಾಕಿಸ್ತಾನದಲ್ಲಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಇಲ್ಲಿಯವರೆಗೆ 343 ಮಕ್ಕಳು ಸೇರಿದಂತೆ 937 ಜನರು ಸಾವನ್ನಪ್ಪಿದ್ದಾರೆ. ಕನಿಷ್ಠ 30 ಮಿಲಿಯನ್ ಜನರು ನಿರಾಶ್ರಿತರಾಗಿದ್ದಾರೆ.ಪ್ರವಾಹ ಸಂತ್ರಸ್ತರ ಪುನರ್ವಸತಿಗಾಗಿ ವಿದೇಶಗಳಲ್ಲಿರುವ ಪಾಕಿಸ್ತಾನಿಯರು ಸೇರಿದಂತೆ ಎಲ್ಲರೂ ದೇಣಿಗೆ ನೀಡುವಂತೆ ಸರ್ಕಾರ ಮನವಿ ಮಾಡಿದೆ.
ಎರಡು ದಿನಗಳ ಅಧಿಕೃತ ಭೇಟಿಗಾಗಿ ಕತಾರ್‌ಗೆ ತೆರಳಿದ್ದ ಶಹಬಾಜ್ ಷರೀಫ್, ದೇಶದ ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನಕ್ಕೆ ವಾಪಸಾಗುತ್ತಿದ್ದಾರೆ.ಪಾಕಿಸ್ತಾನ ಪ್ರಧಾನಿಯ ಮೊಮ್ಮಗಳು ಬ್ರಿಟನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳಂತೆ. ಈ ಹಿನ್ನೆಲೆಯಲ್ಲಿ ಶಹಬಾಜ್ ಷರೀಫ್ ಬ್ರಿಟನ್‌ಗೆ ಭೇಟಿ ನೀಡಬೇಕಿತ್ತು. ಆದ್ರೆ ಪಾಕಿಸ್ತಾನದಲ್ಲಿ ಪ್ರವಾಹದಿಂದ ಭಾರೀ ಸಂಕಷ್ಟ ಎದುರಾಗಿರುವುದರಿಂದ ಬ್ರಿಟನ್ ಪ್ರವಾಸವನ್ನು ರದ್ದು ಮಾಡಿದ್ದಾರೆ.