ಸಾಮಾಜಿಕ ಜಾಲತಾಣದಲ್ಲಿ ಫನ್ನಿ ಫನ್ನಿ ವಿಡಿಯೋಗಳಿಗೇನು ಕೊರತೆಯೇ ಇಲ್ಲ. ನಿಮ್ಮ ಮುಖ ನೋಡಿ ಯಾರಾದರೂ ಭಯಗೊಂಡರೆ ನಿಮಗೆ ಹೇಗನಿಸುತ್ತದೆ ? ಅದರಲ್ಲೂ ಒಂದು ಪ್ರಾಣಿಯು ನಿಮಗೆ ಹೆದರಿದರೆ ಭಾವನೆ ಹತ್ತು ಪಟ್ಟು ಕೆಟ್ಟದಾಗಿರಬಹುದು.
ಸುಂದರ ಮಹಿಳೆಯ ಮುಖವು ತಣ್ಣಗೆ ಕುಳಿತಿದ್ದ ಕೋತಿಯನ್ನು ಗಾಬರಿ ಬೀಳಿಸಿರುವ ವಿಡಿಯೋ ನಕ್ಕು ನಲಿಸುತ್ತಿದೆ.
ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಅದು 23.7 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದ್ದು, 1.9 ಮಿಲಿಯನ್ ಲೈಕ್ ಪಡೆದು ವೈರಲ್ ಆಗಿದೆ.
ಆ ವಿಡಿಯೋ ಕ್ಲಿಪ್ನಲ್ಲಿ, ಹುಡುಗಿಯೊಬ್ಬಳು ಮೃಗಾಲಯಕ್ಕೆ ಭೇಟಿ ನೀಡಿದ್ದು, ಕೋತಿ ಆವರಣದಲ್ಲಿ ಕಿಟಕಿಯ ಮೇಲೆ ಕುಳಿತಿರುವ ಕೋತಿಗೆ ಹಲೋ ಹೇಳಲು ಪ್ರಯತ್ನಿಸಿದ್ದಾಳೆ. ಆ ಹುಡುಗಿ ಕಿಟಕಿಯ ಮೇಲೆ ಬಡಿಯುತ್ತಲೇ ಇದ್ದಾಗಲೂ ಕೋತಿ ಪ್ರತಿಕಿಯಿಸಲಿಲ್ಲ. ಆ ಕೋತಿ ಯಾವುದೋ ಆಳವಾದ ಆಲೋಚನೆಗಳಲ್ಲಿ ಕಳೆದುಹೋಗಿತ್ತು.
ಆದರೆ ಕೋತಿ ಒಮ್ಮೆಲೆ ತಿರುಗಿದಾಗ ಹುಡುಗಿಯ ಮುಖವು ಅದಕ್ಕೆ ಬಹಳ ಹತ್ತಿರದಲ್ಲಿತ್ತು, ಅದನ್ನು ಕಂಡು ಮಂಗವು ತುಂಬಾ ಭಯಭೀತವಾಗಿ ಕೆಳಗೆ ಬೀಳುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ನಗುವ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.