alex Certify ತನ್ನ ಶಾಲೆಯ ದುಃಸ್ಥಿತಿ ವಿವರಿಸಲು ಪತ್ರಕರ್ತನಾದ ಹುಡುಗನಿಗೆ ಸೋನು ಸೋದ್​ ನೆರವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಶಾಲೆಯ ದುಃಸ್ಥಿತಿ ವಿವರಿಸಲು ಪತ್ರಕರ್ತನಾದ ಹುಡುಗನಿಗೆ ಸೋನು ಸೋದ್​ ನೆರವು

ತಾನು ಓದುವ ಶಾಲೆಯ ದುರವಸ್ಥೆಯನ್ನು ಹಂಚಿಕೊಳ್ಳಲು ವರದಿಗಾರನಂತೆ ವರ್ತಿಸಿದ ಪುಟ್ಟ ಶಾಲಾ ಬಾಲಕನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ನಟ ಸೋನು ಸೂದ್​ ಅವರು ಜಾರ್ಖಂಡ್​ನ ಆ ಬಾಲಕ ಸರ್ಫರಾಜ್​ಗೆ ನೆರವಾಗಲು ಬಯಸಿದ್ದಾರೆ.

ಆತನಿಗೆ ಗುಣಮಟ್ಟದ ಶಿಕ್ಷಣದ ಅವಕಾಶವನ್ನು ನೀಡುವ ಭರವಸೆ ನೀಡಿದ್ದು, ಆ ವಿಡಿಯೊವನ್ನು ಅವರೂ ಟ್ವೀಟ್​ ಮಾಡಿದ್ದಾರೆ. ಹೊಸ ಶಾಲೆ ಮತ್ತು ಹಾಸ್ಟೆಲ್​ ನಿನಗಾಗಿ ಕಾಯುತ್ತಿರುವ ಕಾರಣ ಬ್ಯಾಗ್​ ಅನ್ನು ಪ್ಯಾಕ್​ ಮಾಡು ಎಂದು ಸಂದೇಶ ಬರೆದಿದ್ದಾರೆ.

ಕೆಲವು ದಿನಗಳ ಹಿಂದೆ ವೈರಲ್​ ಆಗಿರುವ ವಿಡಿಯೊದಲ್ಲಿ ಬಾಲಕನೊಬ್ಬ ತನ್ನ ಶಾಲೆಯಲ್ಲಿ ಸರಿಯಾದ ಶೌಚಾಲಯ ಇಲ್ಲದಿರುವುದು, ತರಗತಿಗಳ ಹದಗೆಟ್ಟ ಪರಿಸ್ಥಿತಿಯನ್ನು ತೋರಿಸಲು ವರದಿಗಾರನ ರೂಪದಲ್ಲಿ ವರದಿ ಪ್ರಸ್ತುತಪಡಿಸಿದ್ದ. ಅದನ್ನು ವಿಡಿಯೋ ಮಾಡಿದ್ದವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಹಜವಾಗಿಯೇ ಈ ವಿಡಿಯೋ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಬಾಲಕನ ವರದಿಗಾರಿಕೆಯ ಕೌಶಲ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ವಿಡಿಯೋವನ್ನು ಸೋನು ಸೂದ್​ ಗಮನಿಸಿದ್ದು, ಸರ್ಫರಾಜ್​ಗೆ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...