alex Certify ಕಿಕ್ಕಿರಿದ ರೈಲಿನ ಟಾಪ್​ ಏರಲು ಯತ್ನಿಸಿದ ಮಹಿಳೆ…! ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಕ್ಕಿರಿದ ರೈಲಿನ ಟಾಪ್​ ಏರಲು ಯತ್ನಿಸಿದ ಮಹಿಳೆ…! ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಬಾಂಗ್ಲಾದೇಶದಲ್ಲಿ ಕಿಕ್ಕಿರಿದು ತುಂಬಿದ್ದ ರೈಲಿನ ಟಾಪ್​ ಮೇಲೆ ಜನರು ಪ್ರಯಾಣಿಸುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರೈಲಿನಲ್ಲಿ ಪ್ರಯಾಣಿಸಲು ಪರಸ್ಪರ ತಳ್ಳುವ ಮತ್ತು ಜಗಳವಾಡುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಹೊರಹೊಮ್ಮುತ್ತವೆ.

ಜನದಟ್ಟಣೆಯ ಸಮಯದಲ್ಲಿ, ಸ್ಥಳದ ಕೊರತೆಯಿಂದಾಗಿ ಜನರು ರೈಲಿನ ಬಾಗಿಲುಗಳಲ್ಲಿ ನೇತಾಡುವುದುಂಟು ಆದರೆ ಈಗ ವೈರಲ್​ ಆಗುತ್ತಿರುವ ವಿಡಿಯೊದಲ್ಲಿ, ರೈಲಿನಲ್ಲಿ ಯಾವುದೇ ಸೀಟು ಲಭ್ಯವಿಲ್ಲದ ಕಾರಣ ಮಹಿಳೆಯೊಬ್ಬರು ಬಾಂಗ್ಲಾದೇಶದ ಇಂಟರ್​ಸಿಟಿ ಎಕ್ಸ್​ಪ್ರೆಸ್​ಗೆ ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಆಘಾತಕಾರಿ ಸಂಗತಿಯೆಂದರೆ ರೈಲು ಪ್ಲಾಟ್​ಫಾರ್ಮ್‌ನಿಂದ ಹೊರಡುವ ಮೊದಲು 20ಕ್ಕೂ ಹೆಚ್ಚು ಮಂದಿ ಟಾಪ್​ ಮೇಲೆ ಕುಳಿತಿದ್ದರು. ಮಹಿಳೆಯೊಬ್ಬರು ಮೇಲಕ್ಕೆ ಹತ್ತಲು ಹಲವಾರು ಪ್ರಯತ್ನಗಳನ್ನು ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆಕೆ ರೈಲಿನ ಕಿಟಕಿಯ ಬಳಿ ನಿಂತಿದ್ದು, ಟಾಪ್​ ಮೇಲಿದ್ದವರಿಂದ ಸಹಾಯ ಪಡೆಯುತ್ತಾಳೆ. ಅವರು ಆಕೆಯನ್ನು ಎಳೆಯಲು ಪ್ರಯತ್ನಿಸುತ್ತಾರಾದರೂ ಪ್ರಯತ್ನ ವ್ಯರ್ಥವಾಯಿತು. ಕೊನೆಯಲ್ಲಿ ಮಹಿಳೆ ಹತ್ತುವುದನ್ನು ತಡೆಯಲು ಇಬ್ಬರು ಪೊಲೀಸರು ಸ್ಥಳಕ್ಕೆ ಆಗಮಿಸಿದರು.

ಬಾಂಗ್ಲಾದೇಶದ ರೈಲ್ವೆ ನಿಲ್ದಾಣದಲ್ಲಿ ಒಂದು ದಿನ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರಿಗೆ ಇದು ತಮಾಷೆ ವಿಷಯವಾಗಿದ್ದು, ಒಬ್ಬರು ಕಾಮೆಂಟ್​ ಮಾಡಿ, ಈ ರೀತಿಯ ದೃಶ್ಯವನ್ನು ಹಿಟ್​ ಚಿತ್ರ ಸನ್ನಿ ಡಿಯೋಲ್​ ನಟಿಸಿರುವ ‘ಗದರ್​ ಏಕ್​ ಪ್ರೇಮ್​ ಕಥಾ’ ಅನ್ನು ನೆನಪಿಸಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...