ಆತ್ಮೀಯ ಗೆಳತಿ ಎಂಬ ಕಾರಣಕ್ಕೆ ನೀವು ಎಲ್ಲವನ್ನೂ ಅಕೆಯೊಂದಿಗೆ ಹಂಚಿಕೊಂಡಿರಬಹುದು. ಅದರೆ ಮೇಕಪ್ ಸೆಟ್ ಹಂಚಿಕೊಳ್ಳುವ ಮುನ್ನ ಅಲೋಚಿಸಿ. ಏಕೆಂದರೆ…?
ಕಣ್ಣಿಗೆ ಹಚ್ಚುವ ಪೆನ್ಸಿಲ್ ಅಥವಾ ಬ್ರಶ್ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕನ್ನು ಹಬ್ಬಿಸಬಹುದು. ಹಾಗಾಗಿ ಮಸ್ಕರಾ, ಐಶ್ಯಾಡೋ ಮತ್ತು ಐಲೈನರ್ ನಂಥ ವಸ್ತುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳದಿರಿ.
ಪ್ಯಾಚ್ ಟೆಸ್ಟ್ ಮಾಡುವಾಗಲೂ ಬ್ಯಾಕ್ಟೀರಿಯಾಗಳು ಹರಡಬಹುದು. ಮುಂದಿನ ಬಾರಿ ಕಾಸ್ಮೆಟಿಕ್ಸ್ ಮಳಿಗೆಗೆ ಹೋದಾಗ ಮೇಕಪ್ ಉತ್ಪನ್ನಗಳನ್ನು ಹಚ್ಚಿ ಟೆಸ್ಟ್ ಮಾಡುವ ಮೊದಲು ಬೆರಳಿಗೆ ಹಚ್ಚಿನೋಡಿ. ನೇರವಾಗಿ ಬೆರಳನ್ನು ಮುಳುಗಿಸುವ ಬದಲು ಹತ್ತಿ ಅಥವಾ ಇತರ ಯೂಸ್ ಅಂಡ್ ಥ್ರೋ ಉಪಕರಣ ಬಳಸಿ.
ಬೇರೆಯವರ ಲಿಪ್ಸ್ಟಿಕ್ ಬಳಸುವುದರಿಂದ ನಿಮ್ಮ ತುಟಿಯ ಮೇಲೆ ಗುಳ್ಳೆಗಳಾಗಬಹುದು. ಇದು ಜೀವನದುದ್ದಕ್ಕೂ ನಿಮ್ಮೊಂದಿಗೆ ಉಳಿದುಬಿಡಬಹುದು. ಬ್ರಶ್ ಅನ್ನು ಹಂಚಿಕೊಳ್ಳುವುದರಿಂದ ಮೊಡವೆಗಳಾಗುವ ಸಾಧ್ಯತೆಯೂ ಇದೆ. ಮೇಕಪ್ ಮಾಡುವವರಿದ್ದರೆ ಕಡ್ಡಾಯವಾಗಿ ಗ್ಲೌಸ್ ಬಳಸಲು ಹೇಳಿ.