ಜೀವನದಲ್ಲಿ ಅನೇಕ ಬಾರಿ ಕಷ್ಟಗಳು ಎದುರಾಗುತ್ತವೆ. ಹಗಲು-ರಾತ್ರಿ ದುಡಿದ್ರೂ ಯಶಸ್ಸು ಪ್ರಾಪ್ತಿಯಾಗುವುದಿಲ್ಲ. ಮನೆಯ ವಾಸ್ತು ಇದಕ್ಕೆ ಕಾರಣವಾಗಬಹುದು. ಅನೇಕರು ವಾಸ್ತುವನ್ನು ಜೀವನದಲ್ಲಿ ಹಗುರವಾಗಿ ತೆಗೆದುಕೊಳ್ತಾರೆ. ಇದು ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಮನೆಯಲ್ಲಿರುವ ಹಾಳಾದ, ಮುರಿದ ವಿಗ್ರಹಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಛಿದ್ರವಾದ ವಿಗ್ರಹವನ್ನು ಮನೆಯಲ್ಲಿ ಇಡಬಾರದು. ಇದು ಮನೆ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.
ಮನೆಯಲ್ಲಿರುವ ಕೊಳಕು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಸ್ವಚ್ಛತೆ ಇಲ್ಲದ ಸ್ಥಳದಲ್ಲಿ ತಾಯಿ ಲಕ್ಷ್ಮಿ ನೆಲೆಸುವುದಿಲ್ಲ. ಹಾಗಾಗಿ ಮನೆಯನ್ನು ಸ್ವಚ್ಛವಾಗಿಡಬೇಕು.
ಮುಸ್ಸಂಜೆ ಸಮಯದಲ್ಲಿ ಮನೆಯ ಮೂಲೆ ಮೂಲೆಯಲ್ಲಿ ಬೆಳಕಿರಬೇಕು. ಮುಸ್ಸಂಜೆ ಸಮಯದಲ್ಲಿ ಎಲ್ಲ ದೇವಾನುದೇವತೆಗಳು ಪೃಥ್ವಿ ಲೋಕಕ್ಕೆ ಭೇಟಿ ನೀಡುತ್ತಾರಂತೆ. ಹಾಗಾಗಿ ಈ ಸಮಯದಲ್ಲಿ ಕತ್ತಲೆಯಿದ್ರೆ ದೇವರು ಮುನಿಸಿಕೊಳ್ತಾರೆ. ದೇವರ ಆಶೀರ್ವಾದ ಪಡೆಯಲು ಮನೆ ಮನೆಯಲ್ಲಿ ದೀಪ ಬೆಳಗಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಬೇಕು. ಬೆಳಿಗ್ಗೆ ಮತ್ತು ಸಂಜೆ ತುಳಸಿ ಗಿಡಕ್ಕೆ ದೀಪ ಬೆಳಗಬೇಕು.