ಸ್ಲಿಮ್ ಆಗಿ ಟ್ರಿಮ್ ಆಗಿ ಕಾಣಿಸಿಕೊಳ್ಳಬೇಕು ಎಂಬುದು ಬಹುತೇಕರ ಜೀವನದ ಏಕಮಾತ್ರ ಗುರಿಯಾಗಿರುತ್ತದೆ. ಅದಕ್ಕೆಂದು ಹತ್ತಾರು ಸರ್ಕಸ್ ಗಳನ್ನೂ ಮಾಡಿರುತ್ತಾರೆ. ಯಾವುದು ಕೈಗೂಡದೆ ಕೈಚೆಲ್ಲಿ ಕುಳಿತವರಲ್ಲಿ ನೀವೂ ಒಬ್ಬರಾ, ಹಾಗಾದರೆ ಇಲ್ಲಿ ಕೇಳಿ.
ಯೋಗದಲ್ಲಿ ಎಲಕ್ಕೂ ಮದ್ದಿದೆ. ಈ ಆಸನವನ್ನು ನಿತ್ಯ ಮಾಡುವುದರಿಂದ ದೇಹ ತೂಕ, ಬೊಜ್ಜನ್ನು ಕರಗಿಸಿಕೊಳ್ಳಬಹುದು.
ನವಾಸನ ಅಥವಾ ಬೋಟ್ ಪೋಸ್ ನಲ್ಲಿ ನಿಮ್ಮ ಬೆನ್ನು ಹಾಗೂ ಕಾಲು ಸಮಾನಾಂತರದಲ್ಲಿ ಇರಬೇಕು. ಅಂದರೆ ಕಾಲು ಚಾಚಿ ಕುಳಿತ ಬಳಿಕ ನಿಧಾನವಾಗಿ ಎರಡೂ ಕಾಲನ್ನು ಮೇಲಕ್ಕೆ ಎತ್ತಬೇಕು. ಅರ್ಧದಷ್ಟು ಮೇಲಕ್ಕೆ ಬರುತ್ತಲೇ ಬೆನ್ನು ತುಸು ಹಿಂದೆ ಬಾಗುತ್ತದೆ. ಎರಡೂ ಕೈಗಳಿಂದ ಕಾಲನ್ನು ಆಧಾರವಾಗಿ ಹಿಡಿದುಕೊಳ್ಳಬೇಕು. ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಕುಳಿತು ಮತ್ತೆ ಸಹಜ ಸ್ಥಿತಿಗೆ ಬರಬೇಕು.
ತೋಳುಗಳು ಭುಜದ ನೇರಕ್ಕೆ ಸರಿಯಾಗಿ ಅಗಲಿಸಿಕೊಂಡಾಗ ಹೊಟ್ಟೆಯ ಭಾಗದ ಮಾಂಸ ಖಂಡಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. ಇದರಿಂದ ದೇಹ ತೂಕ ಕಡಿಮೆಯಾಗುವುದು, ಹೊಟ್ಟೆಯ ಬೊಜ್ಜು ಇಳಿಯುವುದು ನಿಸ್ಸಂಶಯ.