ಇದು ಗ್ಯಾಜೆಟ್ ಯುಗ. ದಿನ ನಿತ್ಯ ಬಳಕೆಯ ಪ್ರತಿ ವಸ್ತುವಿಗೂ ಸಂಬಂಧಪಡುವ ಗ್ಯಾಜೆಟ್ಗಳು ಬರುತ್ತಿವೆ. ಸದ್ಯ ಟ್ರೆಂಡಿಂಗ್ನಲ್ಲಿರುವುದು ದೋಸೆ ಮಷೀನ್.
ತಂತ್ರಜ್ಞಾನವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಮತ್ತು ಜನರ ಜೀವನವನ್ನು ಸುಲಭಗೊಳಿಸಲು ಹೊಸ ಆವಿಷ್ಕಾರ ನಡೆಯುತ್ತಿದೆ. ಎಂದಿಗೂ ಊಹಿಸದ ಯಂತ್ರಗಳು ಮತ್ತು ಗ್ಯಾಜೆಟ್ಗಳು ಬರುತ್ತಿವೆ.
ರೊಟ್ಟಿ ತಯಾರಿಸುವುದರಿಂದ ಹಿಡಿದು ಪಾತ್ರೆ ತೊಳೆಯುವುದರವರೆಗೆ ಬಹಳ ದೂರ ಸಾಗಿದ್ದು, ಈ ಸುದೀರ್ಘ ಪಟ್ಟಿಗೆ ಹೊಸದಾಗಿ ಸೇರಿಸುವುದಾಗಿದೆ ಅಡುಗೆಮನೆಯ ಕೆಲಸವನ್ನು ಸ್ವಲ್ಪ ಸುಲಭಗೊಳಿಸಲು ಹೊಸ ಯಂತ್ರ ಮಾರುಕಟ್ಟೆಗೆ ಬಂದಿದೆ.
ಇದನ್ನು “ದೋಸಾ ಪ್ರಿಂಟರ್” ಎಂದು ಪರಿಗಣಿಸಲಾಗಿದೆ, ಸಾಮಾನ್ಯ ಪ್ರಿಂಟರ್ನಂತೆ ಅದು ಗರಿಗರಿಯಾದ ದೋಸೆಗಳನ್ನು ಮುದ್ರಿಸಿಕೊಡುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಈ ಯಂತ್ರದ ವೀಡಿಯೊ ವೈರಲ್ ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ವಿಡಿಯೋದಲ್ಲಿ, ಒಬ್ಬಾಕೆ ಯಂತ್ರದ ಒಂದು ಬದಿಯಲ್ಲಿ ದೋಸೆ ಹಿಟ್ಟನ್ನು ಸುರಿಯುತ್ತಾಳೆ. ನಂತರ, ಅವಳು ದೋಸೆಯ ದಪ್ಪವನ್ನು ನಿಗದಿ ಮಾಡುವ ಆಯ್ಕೆ ಅನುಸರಿಸಿ, ತನಗೆ ಬೇಕಾದ ದೋಸೆಯ ಸಂಖ್ಯೆಯನ್ನು ನಿಗದಿಪಡಿಸುತ್ತಾಳೆ. ಮುಂದೆ ಏನಾಗುತ್ತದೆ ಎಂದು ವಿಡಿಯೋವನ್ನೇ ನೋಡಬೇಕು.
ದೋಸೆ ಜನಪ್ರಿಯ ತಿಂಡಿಯಾಗಿದ್ದು, ಭಾರತದ ಕೆಲವು ರಾಜ್ಯಗಳಲ್ಲಿ ಮಾತ್ರವಲ್ಲದೇ ಯಾವುದೇ ನಗರದ ಮೂಲೆ ಮೂಲೆಯಲ್ಲಿ ಸ್ಟಾಲ್ ಕಾಣಬಹುದು. ಹೀಗಾಗಿ ನೆಟ್ಟಿಗರಿಗೆ ಇದೊಂದು ಆಸಕ್ತಿದಾಯಕ ವಿಷಯವಾಗಿ ಕಾಣಿಸಿದ್ದು, ಬಗೆಬಗೆಯ ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ನೀಡುತ್ತಿದ್ದಾರೆ.