alex Certify BIG NEWS: ಮಹಿಳೆ ಕಣ್ಣಿನ ಕೆಳಗೆ ಸಿಕ್ಕಿಕೊಂಡಿದ್ದ ಟೂತ್​ ಬ್ರಶ್ ಶಸ್ತ್ರ ಚಿಕಿತ್ಸೆ ಮೂಲಕ ಹೊರಕ್ಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಹಿಳೆ ಕಣ್ಣಿನ ಕೆಳಗೆ ಸಿಕ್ಕಿಕೊಂಡಿದ್ದ ಟೂತ್​ ಬ್ರಶ್ ಶಸ್ತ್ರ ಚಿಕಿತ್ಸೆ ಮೂಲಕ ಹೊರಕ್ಕೆ…!

ಹಲ್ಲುಜ್ಜುವ ವೇಳೆ ಆಕಸ್ಮಿಕವಾಗಿ ಬ್ರಶ್​ ಕಣ್ಣಿನ ಕೆಳಗೆ ಚುಚ್ಚಿಕೊಂಡ ಪ್ರಸಂಗವೊಂದು ನಡೆದಿದ್ದು, ಇದೀಗ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಟೂತ್​ ಬ್ರಶ್​ ತೆಗೆದಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್​ ಸಮೀಪದ ಹಿರೂರು ಗ್ರಾಮದ ಗೃಹಿಣಿ ವಿನೋದಾ ತಳವಾರ ಆಗಸ್ಟ್​ 14ರಂದು ಮುಂಜಾನೆ ತನ್ನ ನಾಲ್ಕು ವರ್ಷದ ಮಗಳ ಹಲ್ಲುಜ್ಜುತ್ತಿದ್ದಾಗ, ಮಗು ತಮಾಷೆಯಾಗಿ ಬ್ರಷ್​ ಅನ್ನು ದೂರ ತಳ್ಳಿದೆ, ಅದು ವಿನೋದಾ​ ಎಡಗಣ್ಣಿನ ಕೆಳಗೆ ಚುಚ್ಚಿತು. ಇಡೀ ಮನೆಯವರೆಲ್ಲ ಗಾಬರಿಬಿದ್ದು ಬ್ರಷ್​ ಅನ್ನು ಎಚ್ಚರಿಕೆಯಿಂದ ಸರಿಸಲು ಪ್ರಯತ್ನಿಸಿದ್ದರು. ಆದರೆ, ಹಲ್ಲುಜ್ಜುವ ಬ್ರಷ್​ ನಡುವೆ ಮುರಿದು ದೊಡ್ಡ ತುಂಡು ಮುಖದ ಮೇಲೆ ಇನ್ನೂ ಆಳವಾಗಿ ಅಂಟಿಕೊಂಡಿತ್ತು.

ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರು ಸೂಚಿಸಿದ ನಂತರ ಮಹಿಳೆಯನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕಿಯ ವಿಜ್ಞಾನ ಸಂಸ್ಥೆಗೆ (ಕಿಮ್ಸ್​) ಸ್ಥಳಾಂತರಿಸಲಾಯಿತು. ಎಲ್ಲಾ ರೀತಿ ಪರಿಶೀಲನೆ ಬಳಿಕ ಘಟನೆ ನಡೆದ ಮೂರು ದಿನಗಳ ನಂತರ ಟೂತ್​ ಬ್ರಷ್​ನ ಮುರಿದ ತುಂಡನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ತೆಗೆದುಹಾಕಲಾಯಿತು.

ಎಚ್ಚರಿಕೆಯಿಂದ ನಿರ್ವಹಿಸದಿದ್ದರೆ, ಒಂದು ಕಣ್ಣು ಶಾಶ್ವತವಾಗಿ ಕುರುಡಾಗಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ. ಇದೊಂದು ಅಪರೂಪದ ಶಸ್ತ್ರಚಿಕಿತ್ಸೆ. ಮುಖದಲ್ಲಿ 7-8 ಸೆಂ.ಮೀ ಆಳವಾದ ಗಾಯದೊಂದಿಗೆ ಕಣ್ಣಿನ ಕೆಳಗೆ ಚುಚ್ಚಿದ ಪ್ಲಾಸ್ಟಿಕ್​ ಟೂತ್​ ಬ್ರಷ್ನ್​ 7 ಸೆಂ.ಮೀ. ಮುರಿದ ತುಂಡನ್ನು ನಾವು ತೆಗೆದುಹಾಕಿದ್ದೇವೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಎಂದು ಕಿಮ್ಸ್​ನ ತಜ್ಞ ವೈದ್ಯ ಡಾ. ಮಂಜುನಾಥ್​ ವಿಜಾಪುರ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...