alex Certify ಬೆರಗುಗೊಳಿಸುವಂತಿದೆ ಆಸ್ಟ್ರೋಗ್ರಾಫರ್​ ಸೆರೆಹಿಡಿದ ಚಂದ್ರನ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗುಗೊಳಿಸುವಂತಿದೆ ಆಸ್ಟ್ರೋಗ್ರಾಫರ್​ ಸೆರೆಹಿಡಿದ ಚಂದ್ರನ ಫೋಟೋ

ಚಂದ್ರ ಖಗೋಳಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಸಾಮಾನ್ಯ ಜನರಿಗೆ ಆಕರ್ಷಣೆಯ ವಿಷಯವಾಗಿ ಉಳಿದಿದ್ದಾನೆ. ಚಂದ್ರನ ಬಗ್ಗೆ ಒಂದು ವಿಶೇಷ ಆಪ್ತತೆಯೂ ಇದೆ.

ಚಂದ್ರನತ್ತ ನಾಸಾದ ಆರ್ಟೆಮಿಸ್​ 1 ಮಿಷನ್​ ಪ್ರಾರಂಭಿಸುವ ಕೆಲವು ದಿನಗಳ ಮೊದಲು, ಚಂದ್ರನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದು, ಅದರ ಸೌಂದರ್ಯವನ್ನು ಇನ್ನಷ್ಟು ಆರಾಧಿಸುವಂತೆ ಮಾಡುತ್ತಿದೆ.

ಖಗೋಳ ಛಾಯಾಗ್ರಾಹಕರಾದ ಆಂಡ್ರ್ಯೂ ಮೆಕಾಥಿರ್ ಮತ್ತು ಕಾನರ್​ ಮ್ಯಾಥರ್ನೆ ಚಂದ್ರನ 2,00,000 ಕ್ಕೂ ಹೆಚ್ಚು ಚಿತ್ರಗಳನ್ನು ಸೆರೆಹಿಡಿದಿದ್ದಾರೆ ಹಾಗೂ ‘ಫೋಟೋ-ಸ್ಟಿಚಿಂಗ್​’ ಎಂಬ ತಂತ್ರವನ್ನು ಬಳಸಿಕೊಂಡು ಅವುಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಇದರ ಫಲಿತಾಂಶವು ಆಕಾಶಕಾಯದ ವಿಸ್ಮಯಕಾರಿಯಾಗಿ ವಿವರ ನೀಡಿದೆ.

ಅವರು ಎರಡು ವರ್ಷಗಳ ಹಿಂದೆ ಈ ಯೋಜನೆಯಲ್ಲಿ ಪರಸ್ಪರ ಸಹಕರಿಸಿದ್ದರು. ತಮ್ಮ ಹಳೆಯ ಮೂನ್​ ಶಾಟ್​ ಅನ್ನು ಇನ್ನೂ ಉತ್ತಮವಾದ ಚಿತ್ರದೊಂದಿಗೆ ಮೀರಿಸಿ ಸೆರೆ ಹಿಡಿಯಲು ನಿರ್ಧರಿಸಿದ್ದರು ಎಂದು ಮ್ಯಾಥರ್ನೆ ಬರೆದಿದ್ದಾರೆ.

ಇದು ತಾನು ತೆಗೆದುಕೊಂಡ ಚಂದ್ರನ ಅತ್ಯುನ್ನತ ರೆಸಲ್ಯೂಶನ್​ ಶಾಟ್​ ಎಂದು ಮಾಥರ್ನ್​ ಹೇಳಿದ್ದಾರೆ. ನೆಟ್ಟಿಗರು ಈ ಚಿತ್ರವನ್ನು ನೋಡಿ ಬೆರಗಾಗಿದ್ದಾರೆ. “ಚಂದ್ರನಿಗೆ ಈ ಎಲ್ಲಾ ಬಣ್ಣಗಳ ಛಾಯೆಗಳಿವೆ ಎಂದು ಯಾರು ಭಾವಿಸಿದ್ದರು? ಇದು ಇಲ್ಲಿಯವರೆಗೆ ಯಾವಾಗಲೂ ಬೂದು ಅಥವಾ ಬಿಳಿ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಇದೊಂದು ಅದ್ಭುತ ಕೆಲಸ” ಎಂದು ಕಾಮೆಂಟ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...