alex Certify ಮತ್ತೊಂದು ದಾಖಲೆಗೆ ಸಜ್ಜಾದ ಅಯೋಧ್ಯೆ; ದೀಪಾವಳಿಯಂದು ಬೆಳಗಲಿವೆ 14 ಲಕ್ಷ ಹಣತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ದಾಖಲೆಗೆ ಸಜ್ಜಾದ ಅಯೋಧ್ಯೆ; ದೀಪಾವಳಿಯಂದು ಬೆಳಗಲಿವೆ 14 ಲಕ್ಷ ಹಣತೆ

ಅಯೋಧ್ಯೆಯ ಸರಯೂ ನದಿ ತಟದಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದ ವೇಳೆಗೆ ರಾಮಮಂದಿರ ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿದೆ ಎಂದು ಹೇಳಲಾಗಿದೆ.

ಇದರ ಮಧ್ಯೆ ಈ ಬಾರಿಯ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದ್ದು, ದಾಖಲೆಯ 14 ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆ.

ಈ ಹಿಂದೆ 2017ರಲ್ಲಿ ಪ್ರಥಮ ಬಾರಿಗೆ 51,000 ಹಣತೆಯನ್ನು ಬೆಳಗಿಸಲಾಗಿದ್ದು, 2018 ರಲ್ಲಿ 4.10 ಲಕ್ಷ, 2020ರಲ್ಲಿ 6 ಲಕ್ಷ ಹಾಗೂ 2021 ರಲ್ಲಿ 9 ಲಕ್ಷ ಹಣತೆ ಬೆಳಗಿಸುವ ಮೂಲಕ ಗಿನ್ನಿಸ್ ದಾಖಲೆಗೆ ಪಾತ್ರವಾಗಿತ್ತು. ಇದೀಗ ಈ ಬಾರಿಯ ದೀಪಾವಳಿಯಲ್ಲಿ ಮತ್ತೊಂದು ದಾಖಲೆಗೆ ಅಯೋಧ್ಯೆ ಪಾತ್ರವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...