ಮೊಸಳೆ ಎಂಬ ಪದವನ್ನು ಕೇಳಿದ್ರೆ ಸಾಕು ಮೈಯಲ್ಲಿ ನಡುಕ ಬಂದಂತಾಗುತ್ತದೆ. ಬಹುಶಃ ಸ್ಟೀವ್ ಇರ್ವಿನ್ ಮಾತ್ರ ಅದನ್ನು ಕೇಳಲು ಉತ್ಸುಕರಾಗಿದ್ದರೇನೋ. ಅದರ ಚೂಪಾದ ಹಲ್ಲುಗಳು, ದೊಡ್ಡ ದವಡೆಗಳು ಮತ್ತು ರಾಕ್ಷಸ ನೋಟವನ್ನು ನೋಡಿದ್ರೆ ಜಂಘಾಬಲವೇ ಉಡುಗಿ ಹೋಗುತ್ತದೆ. ಮುಖಾಮುಖಿಯಾದರಂತೂ ಅಷ್ಟೇ ಕತೆ. ಇದೀಗ, ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಮೊಸಳೆಗಳ ಅಪರೂಪದ ವರ್ತನೆಯನ್ನು ತೋರಿಸಿದೆ.
ಐಎಫ್ಎಸ್ ಅಧಿಕಾರಿ ಸುಸಂತ ನಂದಾ ಅವರು ಹಂಚಿಕೊಂಡಿರುವ ವಿಡಿಯೋ, ಆವರಣದೊಳಗಿನ ವ್ಯಕ್ತಿಯ ಮೇಲೆ ಬೃಹತ್ ಮೊಸಳೆ ನೆಗೆಯುತ್ತಾ ಮುಂದೆ ಬರುತ್ತಿರುವುದನ್ನು ನೋಡಬಹುದು. ಮೊಸಳೆಯು ತನ್ನ ಉಗುರುಗಳ ಮೇಲೆ ನಿಂತಿದ್ದು, ವ್ಯಕ್ತಿಯ ಕಡೆಗೆ ವೇಗವಾಗಿ ಹಾರುತ್ತಾ ಓಡಿದೆ. ಈ ದೃಶ್ಯ ನೋಡಿದ್ರೆ ಒಂದು ಕ್ಷಣ ನಡುಕ ಹುಟ್ಟೋದು ಖಚಿತ.
ನಾನು ಮೊಸಳೆ ಓಡುವುದನ್ನು ನೋಡಿರಲಿಲ್ಲ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ 28 ಸಾವಿರ ವೀಕ್ಷಣೆಗಳನ್ನು ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಮೊಸಳೆಯ ಚಾಣಾಕ್ಷತನಕ್ಕೆ ಜನರು ಬೆರಗಾಗಿದ್ದಾರೆ.