ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಅಜ್ಜನಿಗೆ ಚೈತನ್ಯವನ್ನು ಹೆಚ್ಚಿಸಲು ಕುಟುಂಬವೊಂದು ಹೃದಯಪೂರ್ವಕವಾಗಿ ನೃತ್ಯ ಮಾಡುವ ಅದ್ಭುತ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಐಪಿಎಸ್ ಅಧಿಕಾರಿ ಎಚ್ಜಿಎಸ್ ಧಲಿವಾಲ್ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಷರ್ರಿ ಮಾನ್ ಅವರ ತ್ರೀ ಪೆಗ್ ಹಾಡಿಗೆ ಪೇಟವನ್ನು ಧರಿಸಿರುವ ವ್ಯಕ್ತಿಯೊಬ್ಬ ಭಾಂಗ್ರಾ ನೃತ್ಯ ಮಾಡುವುದರೊಂದಿಗೆ ವಿಡಿಯೋ ಶುರುವಾಗುತ್ತದೆ. ಆತನೊಂದಿಗೆ ಒಬ್ಬಾಕೆ ಯುವತಿ, ಮಹಿಳೆ ಮತ್ತು ವೃದ್ಧೆ ಕೂಡ ಸ್ಟೆಪ್ಸ್ ಹಾಕಿದ್ದಾರೆ. ಬಹುಶಃ ಚಿಕಿತ್ಸೆ ಪಡೆಯುತ್ತಿರುವ ಅನಾರೋಗ್ಯದ ವ್ಯಕ್ತಿಯ ಪತ್ನಿ ಆಗಿರಬಹುದು. ತಾತನನ್ನು ಹುರಿದುಂಬಿಸಲು ಇವೆರಲ್ಲಾ ನೃತ್ಯ ಮಾಡುತ್ತಿದ್ದರೆ, ಹಾಸಿಗೆಯಲ್ಲಿ ಮಲಗಿದ್ದ ವ್ಯಕ್ತಿಯ ಮೊಗದಲ್ಲಿ ನಗು ಮೂಡಿದೆ.
ನಂತರ ವೃದ್ಧ ಮಹಿಳೆ ಮಲಗಿದ್ದ ವ್ಯಕ್ತಿಯ ಕೈಯನ್ನು ಹಿಡಿದು ನೃತ್ಯದ ಹೆಜ್ಜೆಗಳಿಗೆ ಲಯಬದ್ಧವಾಗಿ ಬೀಸುತ್ತಾಳೆ. ಹಲವಾರು ವೀಕ್ಷಣೆಗಳು ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳೊಂದಿಗೆ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ಹೃದಯಸ್ಪರ್ಶಿ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.