alex Certify ಕಿಡ್ನಿ ಸಮಸ್ಯೆಗಳಿಗೆ ರಾಮಬಾಣ ʼಬಾಳೆ ದಿಂಡುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಿ ಸಮಸ್ಯೆಗಳಿಗೆ ರಾಮಬಾಣ ʼಬಾಳೆ ದಿಂಡುʼ

ಖಾಲಿ ಹೊಟ್ಟೆಯಲ್ಲಿ ಬಾಳೆ ದಿಂಡಿನ ರಸ ಸೇವಿಸಿ; ವರ್ಷಕ್ಕೆ ಎರಡು ಬಾರಿಯಾದರು ಊಟದ ಜೊತೆಗೆ ಪಲ್ಯ ಮಾಡಿ ಬಡಿಸಿ | Banana stem benefits serve the juice of the banana stem on an empty stomach and see the

ತನ್ನ ದೇಹದ ಎಲ್ಲಾ ಭಾಗವನ್ನೂ ಇತರರಿಗೆ ನೆರವಾಗುವಂತೆ ಬಿಟ್ಟುಕೊಡುವ ಅಪರೂಪದ ಗಿಡ ಬಾಳೆ. ಬಾಳೆಕಾಯಿ, ಹಣ್ಣು, ಹೂ, ಒಳಗಿನ ದಿಂಡು ಎಲ್ಲವೂ ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು, ವಿಟಮಿನ್ ಗಳನ್ನು ಒದಗಿಸುತ್ತದೆ. ಬಾಳೆ ದಿಂಡಿನ ಪ್ರಯೋಜನಗಳೇನು ಎಂದಿರಾ ಇಲ್ಲಿ ಕೇಳಿ.

ಬಾಳೆ ದಿಂಡು ಸಾಕಷ್ಟು ಒಗರನ್ನು ಒಳಗೊಂಡಿರುತ್ತದೆ. ಬಲಿತಿರುವ ಬಾಳೆ ಗೊನೆ ಕಡಿದ ಬಳಿಕ ಅದರ ತಿರುಳನ್ನು ಬಗೆದು ಒಳಗಿರುವ ದಿಂಡನ್ನು ತೆಗೆಯಬೇಕು. ಇದು ಕಿಡ್ನಿ ಸ್ಟೋನ್ ಗೆ ರಾಮಬಾಣ. ಅಂದರೆ ಕಿಡ್ನಿಯಲ್ಲಿ ಕಲ್ಲಾಗಿದ್ದರೆ ವೈದ್ಯರು ಬಾಳೆ ದಿಂಡು ಸೇವಿಸಲು ಸಲಹೆ ನೀಡುತ್ತಾರೆ. ಕಲ್ಲನ್ನು ಕರಗಿಸುವ ವಿಶೇಷ ಶಕ್ತಿ ಇದಕ್ಕಿದೆ.

ಹೊಟ್ಟೆಯಲ್ಲಿ ಸೇರಿಕೊಂಡ ಕಲ್ಮಶಗಳನ್ನು ಇದು ಸ್ವಚ್ಛವಾಗಿಸುತ್ತದೆ. ಸಣ್ಣ ಕೂದಲು ಅಥವಾ ಕಸ ಹೊಟ್ಟೆಯೊಳಗಿದ್ದರೆ ಇದು ಅದನ್ನು ಹೊರ ತರಿಸುತ್ತದೆ. ಕಬ್ಬಿಣಾಂಶ ಹೇರಳವಾಗಿರುವ ಬಾಳೆದಿಂಡು ತುಸು ಉಷ್ಣ ಪ್ರವೃತ್ತಿಯದ್ದಾದರಿಂದ ಅತಿಯಾಗಿ ಇದನ್ನು ಸೇವಿಸಬಾರದು.

ಗರ್ಭಿಣಿಯರು ಇದರಿಂದ ದೂರವಿರುವುದೇ ಒಳ್ಳೆಯದು. ಪಲ್ಯ, ಸಾಂಬಾರು, ತಂಬುಳಿ ರೂಪದಲ್ಲಿ ಇದನ್ನು ಸೇವಿಸಬಹುದು. ಹಲವು ವಿಧದ ಪ್ರಯೋಜನಗಳನ್ನು ಹೊಂದಿರುವ ಬಾಳೆದಿಂಡನ್ನು ಸೇವಿಸಿ ಉತ್ತಮ ಅರೋಗ್ಯ ನಿಮ್ಮದಾಗಿಸಿಕೊಳ್ಳಿ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...