ವಾರಣಾಸಿಯ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ದೇಗುಲ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಮುಕ್ತಾಯಗೊಂಡಿದೆ. ಬುಧವಾರ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಸೆಪ್ಟೆಂಬರ್ 12 ರಂದು ನ್ಯಾಯಾಲಯ ಈ ಪ್ರಕರಣದ ತೀರ್ಪು ನೀಡಲಿದೆ.
ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಈ ಮಸೀದಿಯ ಬಗ್ಗೆ ಹಿಂದೂಗಳ ಕಡೆಯವರು ಹಿಂದೆ ಶೃಂಗಾರ್ ಗೌರಿ ದೇವಸ್ಥಾನವಿದ್ದು, ಅದನ್ನು ಕೆಡವಿ ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಇಲ್ಲಿ ಯಾವುದೇ ದೇವಾಲಯ ಇರಲಿಲ್ಲ ಎಂದು ಮುಸ್ಲಿಂ ಕಡೆಯವರು ಹೇಳಿಕೊಳ್ಳುತ್ತಾರೆ.
ಆದಾಗ್ಯೂ, ಈ ಮಸೀದಿಯ ಸಮೀಕ್ಷೆಯ ತಂಡವು ಕೊಳದಲ್ಲಿ ಶಿವಲಿಂಗದಂತಹ ಆಕೃತಿ ಇದೇ ಎಂದು ಕಂಡುಹಿಡಿದಾಗ ಈ ವಿವಾದ ತೀವ್ರಗೊಂಡಿತು. ಇದರೊಂದಿಗೆ ಮಸೀದಿಯ ಗೋಡೆಗಳಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಚಿಹ್ನೆಗಳು ಸಹ ಕಂಡುಬಂದಿವೆ. ಶಿವಲಿಂಗ ಎಂದು ವರ್ಣಿಸಲಾದ ಆಕೃತಿ ವಾಸ್ತವವಾಗಿ ಒಂದು ಕಾರಂಜಿ ಎಂದು ಮಸೀದಿಯ ಕಡೆಯವರು ಹೇಳಿಕೊಂಡಿದ್ದಾರೆ.
ವಾರಣಾಸಿಯ ಕೋರ್ಟ್ ನಲ್ಲಿ ಎರಡು ಕಡೆಯವರ ವಾದ ಅಂತ್ಯವಾಗಿದೆ. ಸೆಪ್ಟೆಂಬರ್ 12ಕ್ಕೆ ವಾರಣಾಸಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.