alex Certify ಈ ನಗರದಲ್ಲಿ 60 ವರ್ಷಗಳಿಂದ ಹೊತ್ತಿ ಉರಿಯುತ್ತಿದೆ ಬೆಂಕಿ, ಹರಸಾಹಸಪಟ್ಟರೂ ಆರುತ್ತಿಲ್ಲ ಅಗ್ನಿ ಜ್ವಾಲೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಗರದಲ್ಲಿ 60 ವರ್ಷಗಳಿಂದ ಹೊತ್ತಿ ಉರಿಯುತ್ತಿದೆ ಬೆಂಕಿ, ಹರಸಾಹಸಪಟ್ಟರೂ ಆರುತ್ತಿಲ್ಲ ಅಗ್ನಿ ಜ್ವಾಲೆ…..!

ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ 60 ವರ್ಷಗಳಿಂದ ಹೊತ್ತಿ ಉರಿಯುತ್ತಿರುವ ನಗರವೊಂದಿದೆ. ಇಲ್ಲಿ ವಾಸಿಸುವ ಜನರು ವಲಸೆ ಹೋಗಿದ್ದಾರೆ. 1962ರಲ್ಲಿ ಪ್ರಾರಂಭವಾದ ಈ ಬೆಂಕಿಯನ್ನು ನಂದಿಸಲು ಸಾಕಷ್ಟು ಪ್ರಯತ್ನ ಮಾಡಿದ್ರೂ ಸಾಧ್ಯವಾಗಿಲ್ಲ. ಈ ನಿರ್ಜನ ನಗರದ ಹೆಸರು ಸೆಂಟ್ರಲಿಯಾ. ಇಲ್ಲಿ ನೆಲದಡಿಯಲ್ಲೇ ಬೆಂಕಿ ಇದೆ ಅಂತಾ ಹೇಳಲಾಗುತ್ತದೆ, ಭೂಮಿಯಲ್ಲಿ ಇರುವ ಬಿರುಕುಗಳಿಂದ ವಿಷಕಾರಿ ಅನಿಲ ಹೊರಬರುತ್ತಲೇ ಇರುತ್ತದೆ.

ಮುಂದಿನ 100 ವರ್ಷಗಳ ಕಾಲ ಈ ಬೆಂಕಿ ಹೀಗೆಯೇ ಉರಿಯುತ್ತಲೇ ಇರುತ್ತದೆ ಎನ್ನುತ್ತಾರೆ ತಜ್ಞರು.  ಸೆಂಟ್ರಲಿಯಾ ನಗರ ಅಮೆರಿಕದ ಪೂರ್ವ ಕರಾವಳಿಯಲ್ಲಿರುವ ಪೆನ್ಸಿಲ್ವೇನಿಯಾ ರಾಜ್ಯದಲ್ಲಿದೆ. ಇದು ಒಂದು ಕಾಲದಲ್ಲಿ ಗಣಿಗಳಿಗೆ ಹೆಸರುವಾಸಿಯಾಗಿತ್ತು. 1962ರ ಮೇ ತಿಂಗಳಿನಲ್ಲಿ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡಿತ್ತು. ಆ ಬೆಂಕಿ ನೆಲದಿಂದ ಸಾವಿರಾರು ಅಡಿಗಳಷ್ಟು ಆಳದ ಕಲ್ಲಿದ್ದಲು ಗಣಿಗಳಿಗೆ ನಿಧಾನವಾಗಿ ಹರಡಿದೆ. ಈ ಅವಘಡ ಸಂಭವಿಸಿ 60 ವರ್ಷ ಕಳೆದರೂ ಇನ್ನೂ ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ.

ಬೆಂಕಿ ನಂದಿಸಲು ಸರ್ಕಾರ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿವೆ. ಇಲ್ಲಿ ಕಾರ್ಬನ್ ಮಾನಾಕ್ಸೈಡ್‌ನಂತಹ ಹಾನಿಕಾರಕ ಅನಿಲಗಳು ಕುಸಿಯುತ್ತಿರುವ ನೆಲದ ಬಿರುಕುಗಳ ಮೂಲಕ ಸೋರಿಕೆಯಾಗುತ್ತಲೇ ಇರುತ್ತವೆ. ಹಾಗಾಗಿ ಜನರು ವಾಸ ಮಾಡುವುದು ಅಪಾಯಕಾರಿ. ಕೇವಲ 5 ಮಂದಿ ಮಾತ್ರ ಈ ನಗರದಲ್ಲಿ ವಾಸವಿದ್ದಾರೆ. 1981 ರಲ್ಲಿ ಇಲ್ಲಿನ ನಿವಾಸಿಗಳೆಲ್ಲ ವಲಸೆ ಹೋಗಲಾರಂಭಿಸಿದ್ರು. ಬೆಂಕಿ ಅವಘಡ ಸಂಭವಿಸಿ ಸುಮಾರು 20 ವರ್ಷಗಳ ಕಾಲ ಜನರು ಇಲ್ಲೇ ವಾಸವಿದ್ದರು.

1981ರಲ್ಲಿ ಟಾಡ್ ಡೊಂಬೊವ್‌ಸ್ಕಿ ಎಂಬ 15 ವರ್ಷದ ಹುಡುಗ ತನ್ನ ಮನೆಯ ಹಿಂಭಾಗದಲ್ಲಿ ಆಟವಾಡುತ್ತಿದ್ದ. ಇದ್ದಕ್ಕಿದ್ದಂತೆ ನೆಲದಲ್ಲಿ ಬಿರುಕು ಕಾಣಿಸಿಕೊಂಡು, ಅದು ಕುಸಿಯಲಾರಂಭಿಸಿತ್ತು. ಅದೃಷ್ಟವಶಾತ್‌ ಬಾಲಕ ಬಚಾವ್‌ ಆಗಿದ್ದ. ಈ ಘಟನೆಯ ಬಳಿಕ ಜನರು ಗುಳೆ ಹೋಗಲು ಆರಂಭಿಸಿದ್ರು. 1983ರಲ್ಲಿ ಸರ್ಕಾರವೇ ಇಲ್ಲಿನ ನಿವಾಸಿಗಳನ್ನು ಇಲ್ಲಿಂದ ಸ್ಥಳಾಂತರಿಸಿತು. ಈಗಲೂ ಅವರು ಸೆಂಟ್ರಲಿಯಾದಲ್ಲೇ ನೆಲೆಸಿದ್ದಾರೆ. ಆದ್ರೆ ಜನವಾಸವೇ ಇಲ್ಲದಿರುವುದರಿಂದ ಈ ನಗರಕ್ಕೆ ಸಾರಿಗೆ ವ್ಯವಸ್ಥೆಯನ್ನೂ ಕಡಿತ ಮಾಡಲಾಗ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...