ಶ್ರಾವಣ ಮುಗಿದ ಬಳಿಕ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಈಗಾಗಲೇ ನಾಗರಪಂಚಮಿ, ವರಮಹಾಲಕ್ಷ್ಮಿ ಹಬ್ಬಗಳು ಪೂರ್ಣಗೊಂಡಿದ್ದು ಮತ್ತೊಂದು ದೊಡ್ಡ ಹಬ್ಬವಾದ ಗೌರಿ – ಗಣೇಶ ಸಮೀಪಿಸುತ್ತಿದೆ.
ಇದಾದ ಬಳಿಕ ದಸರಾ, ದೀಪಾವಳಿ ಸೇರಿದಂತೆ ಹಲವು ಹಬ್ಬಗಳು ಬರಲಿದ್ದು, ಖರೀದಿ ಭರಾಟೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಉದ್ಯೋಗಗಳ ನೇಮಕಾತಿಯಲ್ಲೂ ಹೆಚ್ಚಳವಾಗಿದ್ದು, ಆದರೆ ಅಗತ್ಯಕ್ಕೆ ತಕ್ಕಂತೆ ಉದ್ಯೋಗಿಗಳು ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅದರಲ್ಲೂ ಆನ್ಲೈನ್ ಶಾಪಿಂಗ್ ತಾಣಗಳು ಡೆಲಿವರಿ ಏಜೆಂಟ್ ಗಳನ್ನು ದೊಡ್ಡ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದು, ಇದರ ಜೊತೆಗೆ ಸೇಲ್ಸ್ ಮ್ಯಾನ್, ಸೇಲ್ಸ್ ಗರ್ಲ್ ಹುದ್ದೆಗಳಿಗೂ ಹೆಚ್ಚಿನ ಬೇಡಿಕೆ ಇದೆ. ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಮಂಕಾಗಿದ್ದ ಮಾರುಕಟ್ಟೆ, ಈಗ ಮೊದಲಿನಂತೆ ಕಳೆಗಟ್ಟಿದ್ದು, ಉದ್ಯೋಗದ ನೇಮಕಾತಿ ಜೊತೆಗೆ ಉತ್ಪನ್ನಗಳ ಮಾರಾಟವೂ ಹೆಚ್ಚಾಗಿದೆ.