ಸತತ ಎರಡು ದಿನಗಳಿಂದ ಇಳಿಮುಖ ಮಾಡಿದ್ದ ಷೇರು ಪೇಟೆ ಕೊಂಚ ಚೇತರಿಸಿಕೊಂಡಿದೆ. ಆಟೋ, ಮೆಟಲ್, ಬ್ಯಾಂಕ್, ಆಯಿಲ್, ಗ್ಯಾಸ್ ಷೇರುಗಳು ಏರಿಕೆ ದಾಖಲಿಸಿವೆ. ಕುಸಿತದೊಂದಿಗೇ ಆರಂಭವಾದ ಷೇರು ಸೂಚ್ಯಂಕ ಏರಿಳಿತಗಳನ್ನು ದಾಖಲಿಸಿತು, ಆದ್ರೆ ವಹಿವಾಟಿನ ಕೊನೆಯಲ್ಲಿ ದಿನದಲ್ಲೇ ಅತಿ ಹೆಚ್ಚು ಏರಿಕೆಯನ್ನು ಕಂಡಿದೆ.
ಸೆನ್ಸೆಕ್ಸ್ 257.43 ಪಾಯಿಂಟ್ ಹಾಗೂ ನಿಫ್ಟಿ 86.80 ಪಾಯಿಂಟ್‌ಗಳಷ್ಟು ಹೆಚ್ಚಳವಾಗಿದೆ. ಸೆನ್ಸೆಕ್ಸ್ 59,031.30 ಆಗಿದ್ದು, ನಿಫ್ಟಿ 17,577.50ಗೆ ತಲುಪಿದೆ. ಜಾಗತಿಕವಾಗಿ ಷೇರು ಮಾರುಕಟ್ಟೆ ದುರ್ಬಲಗೊಂಡಿದ್ದರಿಂದ ಅದರ ಪರಿಣಾಮ ಭಾರತದಲ್ಲೂ ಆಗಿತ್ತು. ಆದ್ರೆ ಬಲಿಷ್ಠ ಆರ್ಥಿಕತೆ ಮುಂಬೈ ಷೇರು ಮಾರುಕಟ್ಟೆಗೆ ಚೇತರಿಕೆ ನೀಡಿದೆ.
ಯುರೋಪಿಯನ್ ಇಂಧನಗಳ ಬೆಲೆ ಏರಿಕೆ ಪ್ರಮುಖವಾಗಿ ಜಾಗತಿಕ ಷೇರು ಪೇಟೆಗೆ ಹೊಡೆತ ನೀಡುತ್ತಿದೆ. ಎಂ&ಎಂ, ಐಷರ್ ಮೋಟಾರ್ಸ್, ಬಜಾಜ್ ಫೈನ್‌ಸರ್ವ್, ಟೈಟನ್ ಕಂಪನಿ ಹಾಗೂ ಟಾಟಾ ಸ್ಟೀಲ್, ನಿಫ್ಟಿಯಲ್ಲಿ ಏರಿಕೆ ದಾಖಲಿಸಿವೆ. ಆದ್ರೆ ಇನ್ಫೋಸಿಸ್, ಟಿಸಿಎಸ್, ಡಿವಿಸ್ ಲ್ಯಾಬ್ಸ್, ಎಚ್‌ಯುಎಲ್ & ಎಚ್‌ಸಿಲ್ ಟೆಕ್ನಾಲಜೀಸ್ ಷೇರುಗಳು ಕುಸಿತ ಕಂಡಿವೆ.
ಡೆಲ್ಟಾ ಕಾರ್ಪ್, ಬಲ್ರಾಂಪುರ್ ಚಿನಿ & ಅತುಲ್ ಕಂಪನಿಗಳ ಷೇರುಗಳು ಶೇ.100 ರಷ್ಟು ಏರಿಕೆ ಕಂಡಿವೆ. 100ಕ್ಕಿಂತ ಹೆಚ್ಚು ಷೇರುಗಳು 52 ವಾರಗಳಲ್ಲೇ ಅತಿ ಹೆಚ್ಚು ಏರಿಕೆಯನ್ನು ದಾಖಲಿಸಿವೆ.