ಜಾತಕದ ರಾಶಿ ಗೊತ್ತಿರಲಿ ಬಿಡಲಿ ಹೆಸರಿನ ಮೇಲೆ ಬರುವ ರಾಶಿ ಎಲ್ಲರಿಗೂ ತಿಳಿದಿರುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರಕ್ಕೂ ರಾಶಿಗೂ ಸಂಬಂಧವಿದೆ. ನಕ್ಷತ್ರ, ರಾಶಿ ನಿಮಗೆ ಗೊತ್ತಿಲ್ಲವಾದ್ರೆ ಚಿಂತೆ ಬೇಡ. ನಿಮ್ಮ ಹೆಸರಿನ ಮೊದಲ ಅಕ್ಷರ ಯಾವ ರಾಶಿಗೆ ಸೇರುತ್ತದೆ ಎಂಬುದು ಗೊತ್ತಿರಲಿ.
ಹೆಸರು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಒಳ್ಳೆ ಉದ್ಯೋಗ, ಮದುವೆ, ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ನಿಮ್ಮ ಹೆಸರಿನ ರಾಶಿಗನುಗುಣವಾಗಿ ಕೆಲವೊಂದು ಉಪಾಯಗಳನ್ನು ಮಾಡಿ. ಶುಕ್ರನನ್ನು ಬಲಪಡಿಸಿಕೊಳ್ಳಿ.
ಮೇಷ ರಾಶಿ ( ಅ,ಲ,ಚ) : ಏಳು ದಿನಗಳ ಕಾಲ ಬೆಲ್ಲ-ನೀರು, ಹಾಲಿನಿಂದ ಮಾಡಿದ ಮಿಠಾಯಿಯನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ. ಮೊಸರಿನ ತಿಲಕ ಹಚ್ಚಿ.
ವೃಷಭ ರಾಶಿ (ಇ,ಉ,ಎ,ಒ,ವ) : 7 ದಿನಗಳ ಕಾಲ ಕರ್ಪೂರವನ್ನು ನೀರಿಗೆ ಹಾಕಿ ಸ್ನಾನ ಮಾಡಿ. ಶಿವಲಿಂಗಕ್ಕೆ ಗುಲಾಬಿ ಹೂವನ್ನು ಅರ್ಪಿಸಿ.
ಮಿಥುನ (ಕ,ಜ,ಹ) : ನೀರಿಗೆ ಗುಲಾಬಿ ಹೂವನ್ನು ಹಾಕಿ ಸ್ನಾನ ಮಾಡಿ. ಮಹಿಳೆಗೆ 7 ದಿನಗಳ ಕಾಲ ಅಕ್ಕಿಯನ್ನು ದಾನ ರೂಪದಲ್ಲಿ ನೀಡಿ.
ಕರ್ಕ (ಹ,ಡ) : ಬೆಳಿಗ್ಗೆ ಗುಲಾಬಿ ದಳಗಳನ್ನು ನೀರಿಗೆ ಹಾಕಿ ಸ್ನಾನ ಮಾಡಬೇಕು. ಹಾಲಿನ ತಿಲಕವನ್ನಿಟ್ಟುಕೊಳ್ಳಿ.
ಸಿಂಹ (ಮ,ಟ) : 7 ದಿನಗಳವರೆಗೆ ಬೆಳ್ಳಿ ಆಭರಣವನ್ನು ಧರಿಸಿ. ಶಿವಲಿಂಗಕ್ಕೆ ಪೂಜೆ ಮಾಡಿ.
ಕನ್ಯಾ (ಪ) : 7 ದಿನಗಳ ಕಾಲ ಕನ್ಯೆಗೆ ಎಳನೀರು ಅಥವಾ ಖೀರ್ ತಿನ್ನಿಸಿ. ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ.
ತುಲಾ (ರ.ತ) : 7 ದಿನಗಳ ಕಾಲ ಸ್ಫಟಿಕ ಅಥವಾ ಮುತ್ತಿನ ಹಾರವನ್ನು ಧರಿಸಿ. ಲಕ್ಷ್ಮಿಗೆ ಬರ್ಫಿಯನ್ನು ಅರ್ಪಿಸಿ.
ವೃಶ್ಚಿಕ (ನ,ಯ) : ಏಳು ದಿನಗಳ ಕಾಲ ಗುಲಾಬಿ ಬಣ್ಣದ ಬಟ್ಟೆ ಧರಿಸಿ. ಗುಲಾಬಿ ಸುಗಂಧ ಹಾಕಿಕೊಳ್ಳಿ. ಅನ್ನವನ್ನು ದಾನವಾಗಿ ನೀಡಿ.
ಧನು ( ಯ,ಮ,ಪ) : ಗೋಡಂಬಿ ಬರ್ಫಿ ತಯಾರಿಸಿ ಲಕ್ಷ್ಮಿಗೆ ಅರ್ಪಿಸಿ ಅದನ್ನು ಸೇವನೆ ಮಾಡಿ. 7 ದಿನಗಳ ಕಾಲ ಮಹಿಳೆಗೆ ಹಣ ದಾನ ಮಾಡಿ.
ಮಕರ ( ಛ,ಖ,ಗ) : ಏಳು ದಿನಗಳ ಕಾಲ ಗೋಡಂಬಿ ಸೇವನೆ ಮಾಡಿ. ಮಹಿಳೆಗೆ ಮೊಸರನ್ನು ದಾನ ನೀಡಿ. ಕ್ರೀಂ ಕಲರ್ ಬಟ್ಟೆ ಧರಿಸಿ.
ಕುಂಭ (ಸ) : ಏಲಕ್ಕಿಯಿಂದ ಮಾಡಿದ ಮಿಠಾಯಿಯನ್ನು ದೇವರಿಗೆ ಅರ್ಪಿಸಿ. ಚಂದನದ ತಿಲಕವಿಟ್ಟುಕೊಳ್ಳಿ.
ಮೀನ (ದ) : ನೀರಿಗೆ ಚಂದನ ಹಾಕಿ ಸ್ನಾನ ಮಾಡಿ. 7 ದಿನ ನಿರಂತರವಾಗಿ ಸುಗಂಧ ಹಾಕಿಕೊಳ್ಳಿ. ಯಾವುದೇ ಮಹಿಳೆಗೆ ಹಾಲನ್ನು ದಾನ ಮಾಡಿ.