ಶಿವಮೊಗ್ಗ: ಎನ್.ಯು. ಆಸ್ಪತ್ರೆಯಲ್ಲಿ ಈಗ ಕಿಡ್ನಿಯಲ್ಲಿನ ದೊಡ್ಡಕಲ್ಲಿನ ರೋಗಿಗಳಿಗೆ ಸುಪೈನ್ ಮಿನಿಪರ್ಕ್ ಲೇಸರ್ ಶಸ್ತ್ರಚಿಕಿತ್ಸೆ ಲಭ್ಯವಾಗಿದೆ. ಮಲೆನಾಡಿನಲ್ಲಿ ಮೊದಲ ಬಾರಿಗೆ ಎನ್.ಯು. ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.
ಸುಪೈನ್ ಮಿನಿಪರ್ಕ್ ಲೇಸರ್ ಶಸ್ತ್ರಚಿಕಿತ್ಸೆ, ಎನ್.ಯು. ಕಿಡ್ನಿ ಆಸ್ಪತ್ರೆಯ ವೈದ್ಯರ ಸಾಧನೆ. ಕಿಡ್ನಿಯಲ್ಲಿನ ಅತಿದೊಡ್ಡ ಕಲ್ಲಿನ ಚಿಕಿತ್ಸೆಗೆ ಪಿಸಿಎನ್ಎಶಲ್ ಅಥವಾ ಓಪನ್ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಈ ಎರಡೂ ಚಿಕಿತ್ಸೆಯಲ್ಲಿ ಕೆಲವೊಮ್ಮೆ ಅತಿಯಾದ ರಕ್ತಸ್ರಾವ ಹಾಗೂ ತೀವ್ರ ನೋವು ಕೂಡಾ ಉಂಟಾಗಬಹುದು. ಸಾಮಾನ್ಯವಾಗಿ ಪಿಸಿಎನ್ಎಲ್ ಚಿಕಿತ್ಸೆಯ ಸಮಯದಲ್ಲಿ ರೋಗಿಯನ್ನು ಕೆಳಮುಖವಾಗಿ ಮಲಗಿಸಿ ಬೆನ್ನಿನ ಮೂಲಕ ಶಸ್ತ್ರಚಿಕಿತ್ಸೆ ಮಾಡುವುದು ಕ್ರಮ, ಈ ಚಿಕಿತ್ಸೆಯನ್ನು ಉಸಿರಾಟ ಹಾಗೂ ಹೃದಯ ಸಂಬಂಧಿ ಖಾಯಿಲೆಗಳಿರುವವರಿಗೆ ಮಾಡುವುದು ಕ್ಲಿಷ್ಠಕರ ಹಾಗೂ ಅಡ್ಡ ಪರಿಣಾಮವನ್ನುಂಟು ಮಾಡಬಹುದು. ಇಂತಹ ರೋಗಿಗಳಲ್ಲಿ ಸುಪೈನ್ ಮಿನಿಪರ್ಕ್ ಲೇಸರ್ ಶಸ್ತ್ರಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಮಾಡಬಹುದು.
ಸುಮಾರು 65 ವರ್ಷದ ವ್ಯಕ್ತಿಗೆ ಬಲಭಾಗದ ಕಿಡ್ನಿಯಲ್ಲಿ 3 ಸೆಂ.ಮೀ. ಕಲ್ಲು ರಚನೆಯಾಗಿ 3 ವರ್ಷದಿಂದ ಬಳಲುತ್ತಿದ್ದರು. ಇವರಿಗೆ ಉಸಿರಾಟ ಸಂಬಂಧಿ ಖಾಯಿಲೆಯೂ ಇದ್ದು ಬೇರೆ ವಿಧವಾದ ಶಸ್ತ್ರಚಿಕಿತ್ಸೆಗೆ ಸ್ಪಂದಿಸುವುದು ಕಷ್ಟವಾಗಿತ್ತು. ಈ ರೋಗಿಯಲ್ಲಿ ಎನ್.ಯು. ಕಿಡ್ನಿ ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಪ್ರದೀಪ್ ರವರು ಮಲೆನಾಡಿನ ವಿಭಾಗದಲ್ಲಿ ಮೊದಲ ಬಾರಿಗೆ ಸುಪೈನ್ ಮಿನಿಪರ್ಕ್ ಲೇಸರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿರುತ್ತಾರೆ. ಸುಪೈನ್ ಮಿನಿಪರ್ಕ್ ಲೇಸರ್ ಚಿಕಿತ್ಸೆಯಲ್ಲಿ 3-4 ಮಿ.ಮಿ ಗಾಯವಿದ್ದು ರಕ್ತಸ್ರಾವ ಹಾಗೂ ನೋವು ತುಂಬಾ ಕಡಿಮೆ ಮತ್ತು ರೋಗಿಯು ಶೀಘ್ರದಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬಹುದು ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.