ಕೋಲಾರ: ಜೈಪುರದ ಕ್ಯಾಸಿನೋ ಮೇಲೆ ದಾಳಿ ವೇಳೆ ಕರ್ನಾಟಕದ ಅಧಿಕಾರಿಗಳು ಸೇರಿದಂತೆ 84 ಮಂದಿಯನ್ನು ಬಂಧಿಸಲಾಗಿದೆ.
ಕ್ಯಾಸಿನೋದಲ್ಲಿ ಸಿಕ್ಕಿಬಿದ್ದ ಸೈಬರ್ ಕ್ರೈಂ ಇನ್ಸ್ ಪೆಕ್ಟರ್ ರನ್ನು ಸಸ್ಪೆಂಡ್ ಮಾಡಲಾಗಿದೆ. ಕೋಲಾರದ ಸೈಬರ್ ಕ್ರೈಂ ವಿಭಾಗದ ಇನ್ಸ್ ಪೆಕ್ಟರ್ ಆಂಜಿನಪ್ಪ ಅವರನ್ನು ಅಮಾನತು ಮಾಡಲಾಗಿದೆ. ಅವರು ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೋದ ಹಿನ್ನೆಲೆಯಲ್ಲಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕ್ಯಾಸಿನೋದಲ್ಲಿದ್ದ ರಾಜ್ಯದ ಕೆಎಎಸ್ ಅಧಿಕಾರಿ ಶ್ರೀನಾಥ್ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ. ಕೋಲಾರದ ಸೈಬರ್ ಕ್ರೈಂ ವಿಭಾಗದ ಇನ್ಸ್ ಪೆಕ್ಟರ್ ಆಂಜಿನಪ್ಪ. ನಗರಸಭೆ ಸದಸ್ಯ ಸತೀಶ್, ಶಿಕ್ಷಕ ರಮೇಶ್, ಆರ್.ಟಿ.ಓ. ಇಲಾಖೆ ಸಿಬ್ಬಂದಿ ಶಬರೀಶ್, ವ್ಯಾಪಾರಿ ಸುಧಾಕರ ಅವರನ್ನು ಬಂಧಿಸಲಾಗಿದೆ.
ದೆಹಲಿಯ ಮೂಲದ ಇವೆಂಟ್ ಕಂಪನಿಯಿಂದ ಹೈಪ್ರೊಫೈಲ್ ಪಾರ್ಟಿ ಆಯೋಜಿಸಿದ್ದು, ರಾಜಸ್ಥಾನದ ಜೈಪುರದ ಫಾರ್ಮ್ ಹೌಸ್ ನಲ್ಲಿ ಅಶ್ಲೀಲ ನೃತ್ಯ, ಜೂಜಾಟ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಭಾಗಿಯಾಗಲು ತಲಾ ಎರಡು ಲಕ್ಷ ರೂಪಾಯಿ ಚಾರ್ಜ್ ಮಾಡಲಾಗಿತ್ತು. 14 ಐಷಾರಾಮಿ ಕಾರ್, ಒಂದು ಟ್ರಕ್, ಹುಕ್ಕಾ ಪಾಟ್, ವಿದೇಶಿ ಮದ್ಯ ಜಪ್ತಿ ಮಾಡಲಾಗಿದೆ. ಹೈಪ್ರೊಫೈಲ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಕರ್ನಾಟಕ ಮೂಲದ 7 ಜನ ಸೇರಿದಂತೆ 84 ಜನರನ್ನು ಬಂಧಿಸಲಾಗಿದೆ.