ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಎಂದಾಕ್ಷಣ ಮೊದಲು ನೆನಪಾಗುವುದೇ ನಮಗೆ ಉಡುಪಿ…..ಶ್ರೀಕೃಷ್ಣನ ಲೀಲೋತ್ಸವ ಸಂಭ್ರಮ, ವಿವಿಧ ವೇಷಗಳನ್ನು ತೊಟ್ಟು ರಸ್ತೆಯಲ್ಲಿ ಕುಣಿಯುತ್ತಾ ಹೆಜ್ಜೆ ಹಾಕುವ ವೇಷಧಾರಿಗಳು, ಕಲಾವಿದರು…… ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷಧಾರಿಗಳು ಹಾಡು, ನೃತ್ಯದೊಂದಿಗೆ ಬೀದಿಯಲ್ಲಿ ಸಾಗಿದಾಗ ಟ್ರಾಫಿಕ್ ಜಾಮ್ ನಡುವೆ ಸಿಲುಕಿಕೊಂಡ ಯುವತಿಯೊಬ್ಬರು ಕಾರಿನಿಂದ ಇಳಿದು ಕಲಾವಿದರೊಂದಿಗೆ ಹೆಜ್ಜೆಹಾಕಿ ಗಮನ ಸೆಳೆದಿದ್ದಾರೆ.
ವೇಷಧಾರಿಗಳು ಮ್ಯೂಸಿಕ್ ಬ್ಯಾಂಡ್ ಗಳ ಜತೆ ಹೆಜ್ಜೆ ಹಾಕುತ್ತಾ ರಸ್ತೆಯಲ್ಲಿ ಸಾಗಿ ಬರುತ್ತಿದ್ದಂತೆ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ರಸ್ತೆ ಮಧ್ಯೆ ಸಿಲುಕಿಕೊಂಡಿದ್ದಾರೆ. ವೇಷಧಾರಿಯೊಬ್ಬರ ನೃತ್ಯವನ್ನು ಕಾರಲ್ಲೇ ಕುಳಿತು ನೋಡುತ್ತಿದ್ದ ಯುವತಿ, ತಕ್ಷಣ ಕಾರಿನಿಂದ ಇಳಿದು ತಾನೂ ಕೂಡ ವೇಷಧಾರಿಯೊಂದಿಗೆ ಭರ್ಜರಿ ಸ್ಟೆಪ್ ಹಾಕಿ ಕುಣಿದು ಸಂಭ್ರಮಿಸಿದ್ದಾರೆ.
ಕಲಾವಿದನಿಗೆ ಸ್ಪರ್ಧೆಯೊಡ್ಡುವಂತೆ ರಸ್ತೆಯಲ್ಲಿಯೇ ಭರ್ಜರಿಯಾಗಿ ಸ್ಟೆಪ್ ಹಾಕಿದ ಯುವತಿ ಡ್ಯಾನ್ಸ್ ಗೆ ಸುತ್ತಲು ನೆರೆದವರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.