ಆಹಾರಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳಿವೆ. ಆಹಾರ ಪದ್ಧತಿಗನುಗುಣವಾಗಿದ್ರೆ ತಿಂದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಬಹುದು ಮತ್ತು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು
ಊಟ ಮಾಡುವಾಗ ಮಾತನಾಡದೇ ನಿಧಾನವಾಗಿ ತೃಪ್ತಿಯಿಂದ ಊಟ ಮಾಡಬೇಕು.
ಊಟ ಮಾಡುವಾಗ ಟಿವಿ ನೋಡುವ ಅಭ್ಯಾಸ ಇದ್ರೆ ಅದು ಖಂಡಿತ ಒಳ್ಳೆಯದಲ್ಲ. ಇದು ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಹಾನಿ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಬದಲಾಗಿದೆ. ಊಟ ಮಾಡ್ತಾ ಮೊಬೈಲ್‌ನಲ್ಲಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಮಾಡೋದ್ರಿಂದ ಆಹಾರ ಸರಿಯಾಗಿ ಪಚನ ಆಗೋದಿಲ್ಲ. ಇದ್ರಿಂದ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು ಬರಬಹುದು.
ತಂಪು ಪಾನೀಯಗಳು ಅಥವಾ ಹಾಲು ಊಟದ ಸಮಯದಲ್ಲಿ ಸೇವಿಸುವುದು ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಊಟದ ಸಮಯದಲ್ಲಿ ನೀರನ್ನು ಮಾತ್ರ ಕುಡಿಯಿರಿ.
ಊಟ ಅಥವಾ ತಿಂಡಿಯನ್ನ ನಿಂತುಕೊಂಡು, ಓಡಾಡಿಕೊಂಡು ತಿನ್ನಲೇಬೇಡಿ. ಲೈಂಗಿಕ ದುರ್ಬಲತೆ, ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು , ಮೂತ್ರಕೋಶದಲ್ಲಿ ಕಲ್ಲಾಗುವ ಅಪಾಯವನ್ನು ಹೆಚ್ಚಿಸುತ್ತವೆ. ಆ್ಯಸಿಡಿಟಿ, ಮಲಬದ್ಧತೆ, ಮೊಣಕಾಲುಗಳಲ್ಲಿ ನೋವು, ಬೆನ್ನು ನೋವು ಸಹ ಕಾಣಿಸಿಕೊಳ್ಳಬಹುದು. ಊಟದ ನಂತ್ರ ಐದಾರು ನಿಮಿಷ ಮನೆಯಲ್ಲಿಯೇ ವಾಕ್ ಮಾಡಿ.
ಊಟ ಆದ ತಕ್ಷಣ ಮಲಗಿಕೊಳ್ಳಬೇಡಿ. ಆದಷ್ಟು ಕೆಳಗೆ ನೆಲದ ಮೇಲೆ ಕುಳಿತು ಆಹಾರ ಸೇವಿಸಿ.