alex Certify ಫಾರ್ಮಸಿಸ್ಟ್​ ಮದುವೆ ಆಮಂತ್ರಣ ಪತ್ರಕ್ಕೆ ಹರ್ಷ್​ ಗೋಯೆಂಕಾ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಾರ್ಮಸಿಸ್ಟ್​ ಮದುವೆ ಆಮಂತ್ರಣ ಪತ್ರಕ್ಕೆ ಹರ್ಷ್​ ಗೋಯೆಂಕಾ ಫಿದಾ

ಉದ್ಯಮಿ ಹರ್ಷ್​ ಗೋಯೆಂಕಾ ಅವರು ಸಾಕಷ್ಟು ಅತ್ಯಾಸಕ್ತಿಯ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಗಸ್ಟ್​ 20ರಂದು ಅವರು ಮದುವೆ ಆಹ್ವಾನ ಪತ್ರಿಕೆಯನ್ನು ಪೋಸ್ಟ್​ ಮಾಡಿದ್ದು, ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದ್ದಾರೆ.

ಅದು ಫಾರ್ಮಸಿಸ್ಟ್​ ಒಬ್ಬರ ಮದುವೆಯ ಆಮಂತ್ರಣ ಪತ್ರಿಕೆಯಾಗಿದೆ. ಅದು ಸಾಕಷ್ಟು ಹೊಸತನದಿಂದ ಕೂಡಿದ್ದು, ಕ್ರಿಯಾಶೀಲತೆ ಮೆಚ್ಚುವಂತಿದೆ.

ಆ ವ್ಯಕ್ತಿ ಮದುವೆ ಆಮಂತ್ರಣವನ್ನು ಟ್ಯಾಬ್ಲೆಟ್​ಗಳ ಪ್ಯಾಕ್​ನ ಹಿಂಭಾಗದಂತೆ ಕಾಣುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದರು. ಸೂಚನೆಗಳು ಮತ್ತು ಸಲಹೆಗಳ ಬದಲಿಗೆ, ಪಟ್ಟಿಯು ಮದುವೆಯ ದಿನಾಂಕ, ಸಮಯ ಮತ್ತು ವಧು ಮತ್ತು ವರನ ಹೆಸರನ್ನು ಹೊಂದಿತ್ತು. ಮದುವೆಯ ದಿನಾಂಕವು ಸೆಪ್ಟೆಂಬರ್​ 5 ಆಗಿದ್ದರೆ, ವರ ಮತ್ತು ವಧು ಕ್ರಮವಾಗಿ ಎಜಿಲರಸನ್​ ಮತ್ತು ವಸಂತಕುಮಾರಿ ಎಂಬ ಹೆಸರಿನಲ್ಲಿದೆ. ಹಾಗೆಯೇ ಇಬ್ಬರ ವಿದ್ಯಾರ್ಹತೆಯನ್ನೂ ಒಳಗೊಂಡಿತ್ತು.

ಮಾತ್ರೆ ಕವರ್​ ಹಿಂಭಾಗ ಇರುವ ವಾರ್ನಿಂಗ್​ ಸೆಕ್ಷನ್​ ಇಲ್ಲೂ ಇದ್ದು, ಅದರಲ್ಲಿ “ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರು ನನ್ನ ಮದುವೆ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳುವಂತಿಲ್ಲ ಎಂದಿದೆ.

“ಫಾರ್ಮಸಿಸ್ಟ್​ ಮದುವೆಯ ಆಮಂತ್ರಣ! ಈ ದಿನಗಳಲ್ಲಿ ಜನರು ತುಂಬಾ ಇನ್ನೋವೆಟಿವ್​ ಆಗಿದ್ದಾರೆ” ಎಂದು ಹರ್ಷ್​ ಗೋಯೆಂಕಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...