ವ್ಯಕ್ತಿಯೊಬ್ಬ ಟೋಲ್ ಬೂತ್ ಮಹಿಳಾ ಉದ್ಯೋಗಿಗೆ ಕಪಾಳ ಮೋಕ್ಷ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರಾಜ್ ಘರ್ ನಲ್ಲಿ ನಡೆದಿದ್ದು, ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಟೋಲ್ ಕ್ಯಾಬಿನ್ ಒಳಗೆ ಮಹಿಳೆ ನಿಂತಿದ್ದು, ಕಿಟಕಿ ಹೊರಗಿನಿಂದಲೇ ವ್ಯಕ್ತಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಮಹಿಳೆಯು ಸಹ ತಿರುಗಿ ಹೊಡೆದಿದ್ದು, ಮಾರಾಮಾರಿ ಆರಂಭವಾಗಿದೆ.
ಈ ವೇಳೆ ಮಹಿಳೆ ಸಹೋದ್ಯೋಗಿ ರಕ್ಷಣೆಗಾಗಿ ಓಡೋಡಿ ಬಂದಿದ್ದು, ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟೋಲ್ ಶುಲ್ಕ ನೀಡಲು ನಿರಾಕರಿಸಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.