ಕಾರು ಖರೀದಿಸಿ ಮಾಜಿ ಗೆಳತಿಗೆ ಥ್ಯಾಂಕ್ಸ್ ಹೇಳಿದ ವ್ಯಕ್ತಿ: ವೈರಲ್ ಆಯ್ತು ಈ ಪೋಸ್ಟ್ 22-08-2022 10:28AM IST / No Comments / Posted In: Latest News, India, Live News ಲಿಂಕ್ಡ್ಇನ್, ಇದು ಕೆಲಸ ಮಾಡುವ ಆಸಕ್ತರಿಗೆ, ಹಾಗೂ ಕೆಲಸಗಾರರನ್ನ ಹುಡುಕೋ ಕಂಪನಿಗಳಿಗೆನೇ ಅಂತ ಸೃಷ್ಟಿಸಲಾಗಿರು ವೆಬ್‌ಸೆಟ್. ಈ ವೆಬ್‌ಸೈಟ್ ಮೂಲಕವೇ ಅನೇಕರು ವಿವಿಧ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಕೆಲವರು ಇದೇ ವೆಬ್‌ಸೈಟ್‌ಲ್ಲಿ ತಮ್ಮ ಜೀವನದಲ್ಲಿ ಘಟಿಸಿರುವ ವಿಶೇಷ ಅನುಭವನ್ನ ಸಹ ಬರೆದುಕೊಳ್ಳುತ್ತಾರೆ. ಇತ್ತೀಚೆಗೆ ಮಧುಸಿಂಗ್ ಅನ್ನುವವರು ಕೂಡಾ ಒಂದು ಸ್ಪೆಷಲ್ ಸಂದೇಶವನ್ನ ಪೋಸ್ಟ್ ಮಾಡಿದ್ದಾರೆ. ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ಆಗಿರೋ ಪೋಸ್ಟ್ ನಲ್ಲಿ ಮಧುರ್ ಸಿಂಗ್ ಬರೆದುಕೊಂಡಿರೋ ವಿಷಯ ನಿಜಕ್ಕೂ ಸ್ವಾರಸ್ಯಕರವಾಗಿದೆ. ಅದನ್ನು ಇವರು ಎಲ್ಲರೊಂದಿಗೆ ಹಂಚಿಕೊಳ್ಳಲು ಲಿಂಕ್ಡ್ಇನ್ ವೆಬ್‌ಸೈಟ್‌ನ್ನ ಬಳಸಿದ್ದಾರೆ. ಇದರಲ್ಲಿ ಮಧುರ್‌ಸಿಂಗ್, ಯಾವುದೇ ಸಾಲ ಅಥವಾ EMI ಇಲ್ಲದೆ ಕಾರನ್ನ ಖರೀದಿಸಿದ್ದು ಹೇಗೆ ಅಂತ ಬರೆದುಕೊಂಡಿದ್ದಾರೆ. ಜೊತೆಗೆ ಈ ಸಾಧನೆಗೆ ಕಾರಣವಾದವರನ್ನ, ತನ್ನ ಮಾಜಿ ಮಾಲೀಕ, ಹಾಗೂ ತನ್ನ ಮಾಜಿ ಗೆಳತಿಗೆ ಧನ್ಯವಾದ ಹೇಳಿದ್ದಾರೆ. ಅಷ್ಟೆ ಅಲ್ಲ ತರಕಾರಿ ಮಾರಾಟ ಮಾಡುವ ವ್ಯಕ್ತಿಗೂ ಥ್ಯಾಂಕ್ಯೂ ಹೇಳಿದ್ಧಾರೆ. “ ಈ ವಿಷಯ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವುದಕ್ಕೆ ನನಗೆ ಖುಷಿಯಾಗುತ್ತಿದೆ. ನಾನು ಟಾಟಾ ಟಿಯಾಗೋ ಅನ್ನೋ ಹೊಸ ಕಾರನ್ನ ಖರೀದಿಸಿದ್ದೇನೆ. ಅದಕ್ಕಾಗಿ ನಾನು ಸಾಲ ಮಾಡಿಲ್ಲ, EMI ಕೂಡಾ ತೆಗೆದುಕೊಂಡಿಲ್ಲ. ಪೂರ್ಣ ನಗದನ್ನ ಕೊಟ್ಟಿದ್ದೇನೆ. ಕಾರನ್ನ ಕೊಂಡುಕೊಳ್ಳಲೆಂದೇ ನಾನು ಅನೇಕ ವರ್ಷಗಳಿಂದ ಹಣ ಉಳಿಸುತ್ತಿದ್ದೆ. ನಾನು ವಿನಾಕಾರಣ ದುಂದುವೆಚ್ಚ ಮಾಡುತ್ತಿರಲಿಲ್ಲ. ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿರಲಿಲ್ಲ. ಪತ್ನಿಗೆ, ಇಲ್ಲಾ ಗೆಳತಿಗೆ ಎಂದೂ ದುಬಾರಿ ಉಡುಗೊರೆ ಕೊಡುವುದನ್ನ ಅಭ್ಯಾಸ ಮಾಡಿಕೊಂಡಿಲ್ಲ. ನನ್ನ ಅಮ್ಮ ನನ್ನನ್ನು ತರಕಾರಿ ಕೊಳ್ಳಲು ಕಳುಹಿಸಿದರೆ ನಾನು ತರಕಾರಿ ಮಾರುವವನಿಂದ ಕೊತ್ತಂಬರಿ ಸೊಪ್ಪನ್ನ ಉಚಿತವಾಗಿ ತೆಗೆದುಕೊಂಡು ಹೋಗುತ್ತಿದ್ದೆ. ಇದರಿಂದ ನನಗೆ ಹಣ ಉಳಿಸಲು ಸಹಾಯವಾಗುತ್ತಿತ್ತು. “ ಎಂದು ಮಧುರ್ ಸಿಂಗ್ ಅವರು ಬರೆದುಕೊಂಡಿದ್ದಾರೆ. ಜೊತೆಗೆ “ ನಾನು ರಾತ್ರಿ ಪಾಳಿಯಲ್ಲಿ ವಾಚ್‌ಮನ್ ಆಗಿ, ಮೆಕ್‌ಡೊನಾಲ್ಡ್‌ನಲ್ಲಿ ಕೆಲಸಗಾರನಾಗಿ ದುಡಿದಿದ್ದೇನೆ. ಇನ್ನು ಕೆಲವೊಮ್ಮೆ UPSC ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಟ್ಯೂಷನ್ ಕೊಟ್ಟಿದ್ದೇನೆ.“ ಎಂದು ಪೋಸ್ಟ್‌ಲ್ಲಿ ಮಧುರ್ ಸಿಂಗ್ ಬರೆದಿದ್ಧಾರೆ. “ನಾನು ಹಣ ಉಳಿಸುವುದಕ್ಕಾಗಿ ಆದಷ್ಟು ಪ್ರಯತ್ನ ಮಾಡಿದ್ದೇನೆ. ಕಾರು ಖರೀದಿಸಲು ಬೇಕಾದಷ್ಟು ದುಡ್ಡು ಆದ ತಕ್ಷಣ ನಾನು ಕಾರನ್ನ ಖರೀದಿಸಿದ್ದೇನೆ. ಅದಕ್ಕಾಗಿ ನಾನು ನನ್ನ ಅಪ್ಪ-ಅಮ್ಮ, ನಾನು ಕೆಲಸ ಮಾಡಿರುವ ಕಂಪನಿಗಳ ಮಾಲೀಕರು, ನನ್ನ ಎಕ್ಸ್ ಗರ್ಲ್‌ಫ್ರೆಂಡ್ ಹಾಗೂ ಈಗ ಇರುವ ಎಲ್ಲ ಗೆಳತಿ-ಗೆಳೆಯರಿಗೆ ಧನ್ಯವಾದ, ಇವರೆಲ್ಲರ ಜೊತೆಗೆ ನನಗೆ ಸಹಾಯ ಮಾಡಿದ ತರಕಾರಿ ಮಾರುವವರಿಗೂ ಧನ್ಯವಾದಗಳು“ ಎಂದು ಮಧುರ್ ಸಿಂಗ್ ಅವರು ಡಿಟೈಲ್ ಆಗಿ ಬರೆದಿದ್ದಾರೆ. ಹೊಸ ಕಾರಿನ ಮುಂದೆ ನಿಂತು ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ 20 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದೆ. ಕೆಲವರು ಈ ಪೋಸ್ಟ್ ಓದಿ ತಮಾಷೆ ಮಾಡಿದ್ದಾರೆ. ಒಬ್ಬರಂತೂ “ಏನು, ಹೆಂಡತಿ ಮತ್ತು ಗೆಳತಿ? ಏನಿದರ ಅರ್ಥ ಎಂದು ಬರೆದಿದ್ದಾರೆ.