ಪ್ರಪಂಚದ ಪ್ರತಿಯೊಬ್ಬ ಹುಡುಗಿಯೂ ತನ್ನ ಸಂಗಾತಿ ಪ್ರೀತಿ, ಕಾಳಜಿ ತೋರಬೇಕೆಂದು ಬಯಸುತ್ತಾರೆ. ಆದರೆ ಪ್ರೀತಿ ಜೀವನದಲ್ಲಿ ಎಲ್ಲವೂ ಅಲ್ಲ. ವಾಸ್ತವವಾಗಿ ಜೀವನವನ್ನು ಕಳೆಯಲು ಹಣವು ಅತ್ಯಂತ ಅವಶ್ಯಕವಾಗಿದೆ.
ಅಂತಹ ಪರಿಸ್ಥಿತಿಯಲ್ಲಿ ಹುಡುಗಿಯರು ಶ್ರೀಮಂತ ಪತಿ ಹುಡುಕಾಟ ನಡೆಸುತ್ತಾರೆ. ಈ ರಾಶಿಯ ಹುಡುಗಿಯರಿಗೆ ಶ್ರೀಮಂತ ಪತಿ ಸಿಗ್ತಾನೆ. ಗಂಡನ ಮನೆಯಲ್ಲಿ ಇವ್ರು ರಾಣಿಯಂತೆ ಜೀವನ ನಡೆಸ್ತಾರೆ.
ಮೇಷ ರಾಶಿಯ ಹುಡುಗಿಯರು ಅದೃಷ್ಟವಂತರು. ಪ್ರೀತಿಸುವ ಪತಿ ಮಾತ್ರವಲ್ಲ ಶ್ರೀಮಂತ ಪತಿ ಸಿಗ್ತಾನೆ. ಈ ರಾಶಿಯ ಹುಡುಗಿಯರು ಬಿಂದಾಸ್ ಆಗಿ ಶಾಪಿಂಗ್ ಮಾಡಬಲ್ಲರು. ಈ ರಾಶಿಯ ಹುಡುಗಿಯರನ್ನು ಅವ್ರ ಪತಿ ತುಂಬಾ ಕಾಳಜಿಯಿಂದ ನೋಡಿಕೊಳ್ತಾನೆ. ಗಂಡನ ಮನೆಯಲ್ಲಿ ಇವ್ರು ಆರಾಮವಾಗಿ ಜೀವನ ನಡೆಸ್ತಾರೆ.
ಮಿಥುನ ರಾಶಿಯ ಹುಡುಗಿಯರಿಗೆ ಸರಳ ಹಾಗೂ ಶ್ರೀಮಂತ ಪತಿ ಸಿಗ್ತಾನೆ. ಸಂಗಾತಿಯ ಪ್ರತಿ ಕನಸನ್ನು ಪೂರ್ಣಗೊಳಿಸುತ್ತಾನೆ. ಹಣದ ಕೊರತೆಯುಂಟಾಗದಂತೆ ನೋಡಿಕೊಳ್ತಾನೆ.
ತುಲಾ ರಾಶಿಯ ಹುಡುಗಿಯರ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ. ಪತಿ ಬಳಿ ಬೇಕಾದಷ್ಟು ಹಣವಿರುತ್ತದೆ ಎಂದು ನಂಬಲಾಗಿದೆ. ತುಲಾ ರಾಶಿ ಹುಡುಗಿಯರ ಗಂಡಂದಿರು ಸಂಬಂಧದಲ್ಲಿ ನಿಷ್ಠಾವಂತರಾಗ್ತಾರೆ. ಸಂಗಾತಿಯನ್ನು ಸಂತೋಷದಿಂದ ಇಟ್ಟುಕೊಳ್ತಾರೆ.