alex Certify ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಪರಿಣಾಮಕಾರಿ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಪರಿಣಾಮಕಾರಿ ಮದ್ದು

ಮಧುಮೇಹ ವಾಸಿಯಾಗದಂತ ಖಾಯಿಲೆ ಅಂತಾನೇ ಭಾವಿಸಲಾಗಿದೆ. ಆದ್ರೆ ವಿಜ್ಞಾನಿಗಳು ಅದಕ್ಕೂ ಒಂದು ಪರಿಹಾರ ಕಂಡು ಹಿಡಿದಿದ್ದಾರೆ. ತೂಕವನ್ನು ಕಡಿಮೆ ಮಾಡಿಕೊಂಡ್ರೆ ಟೈಪ್ 2 ಡಯಾಬಿಟೀಸ್ ಅನ್ನು ರಿವರ್ಸ್ ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು.

ದೀರ್ಘಕಾಲದ ದೇಹಸ್ಥಿತಿಯನ್ನೇ ಬದಲಾಯಿಸಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸುಮಾರು 6 ವರ್ಷಗಳಿಂದ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಎಲ್ಲರಿಗೂ ತೂಕ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿತ್ತು.

ಶೇ.86 ರಷ್ಟು ಮಂದಿ ಸುಮಾರು 15 ಕೆಜಿಯಷ್ಟು ತೂಕ ಕಳೆದುಕೊಂಡ್ರೆ, ಶೇ.73ರಷ್ಟು ಜನರು 10 ಕೆಜಿ ತೂಕ ಇಳಿಸಲು ಯಶಸ್ವಿಯಾಗಿದ್ದರು. ಬಹುತೇಕ ಎಲ್ಲರೂ ಡಯಾಬಿಟಿಸ್ ನಿಂದ ಮುಕ್ತಿ ಪಡೆದಿದ್ದಾರೆ. ಸುಮಾರು 3 ತಿಂಗಳುಗಳವರೆಗೆ ಎಲ್ಲರನ್ನೂ ಸ್ಟ್ರಿಕ್ಟ್ ಡಯಟ್ ನಲ್ಲಿಡಲಾಗಿತ್ತು.

ದಿನಕ್ಕೆ ಕೇವಲ 825-853 ಕ್ಯಾಲೋರಿ ಆಹಾರ ನೀಡಲಾಗುತ್ತಿತ್ತು. ತೂಕ ಇಳಿಸಿದ ನಂತರ ಅದನ್ನು ಕಾಪಾಡಿಕೊಳ್ಳಲು ಕೂಡ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಟೈಪ್ 2 ಡಯಾಬಿಟಿಸ್ ನಿಂದ ಬಳಲುತ್ತಿರುವವರು ಡಯಟ್, ನಿಯಮಿತವಾದ ವ್ಯಾಯಾಮ ಮಾಡುವ ಮೂಲಕ ತೂಕ ಇಳಿಸಿಕೊಂಡಲ್ಲಿ ಖಾಯಿಲೆಯಿಂದ ಪಾರಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...