ನವದೆಹಲಿ: ತನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಶೋಪಿಯಾನ್ ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕಾಶ್ಮೀರಿ ಪಂಡಿತ್ ಸುನೀಲ್ ಕುಮಾರ್ ಭಟ್ ಅವರ ಕುಟುಂಬವನ್ನು ಭೇಟಿ ಮಾಡುವುದನ್ನು ತಡೆಯಲು ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭಾನುವಾರ ಹೇಳಿದ್ದಾರೆ.
ಗುಪ್ಕರ್ ಪ್ರದೇಶದಲ್ಲಿನ ತಮ್ಮ ನಿವಾಸದ ಬೀಗ ಹಾಕಿದ ಗೇಟ್ ಗಳು ಮತ್ತು ಹೊರಗೆ ನಿಂತಿದ್ದ ಸಿಆರ್ಪಿಎಫ್ ವಾಹನದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಕೇಂದ್ರದ ಕಠಿಣ ನೀತಿಗಳು ಕಾಶ್ಮೀರಿ ಪಂಡಿತರ ಹತ್ಯೆಗೆ ಕಾರಣವಾಗಿವೆ ಎಂದು ಹೇಳಿದ್ದಾರೆ.