alex Certify 35 ವರ್ಷದ ಬಳಿಕ ಪುಣೆ ಜಿಮ್ಖಾನಾಗೆ ಭೇಟಿ ಕೊಟ್ಟ ಸಚಿನ್​; ಭಾವುಕ ಕ್ಷಣಗಳನ್ನು ಸ್ಮರಿಸಿಕೊಂಡ ಮಾಸ್ಟರ್‌ ಬ್ಲಾಸ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

35 ವರ್ಷದ ಬಳಿಕ ಪುಣೆ ಜಿಮ್ಖಾನಾಗೆ ಭೇಟಿ ಕೊಟ್ಟ ಸಚಿನ್​; ಭಾವುಕ ಕ್ಷಣಗಳನ್ನು ಸ್ಮರಿಸಿಕೊಂಡ ಮಾಸ್ಟರ್‌ ಬ್ಲಾಸ್ಟರ್

ಕ್ರಿಕೆಟ್​ ಕ್ಷೇತ್ರದ ದಂತಕತೆ ಎನಿಸಿಕೊಂಡ ಸಚಿನ್​ ತೆಂಡೂಲ್ಕರ್​ 35 ವರ್ಷಗಳ ನಂತರ ಪುಣೆಯ ಜಿಮ್ಖಾನಾಗೆ ಭೇಟಿ ನೀಡಿ, ತಮ್ಮ ನೆನಪುಗಳನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟರು.

ಸಚಿನ್​ ತಮ್ಮ ಬಾಲ್ಯದ ಕಥೆಯನ್ನು ಹಂಚಿಕೊಳ್ಳಲು ಇನ್​ಸ್ಟಾಗೆ ಕರೆದೊಯ್ದಿದ್ದಾರೆ. ಮುಂಬೈ ಯು-15 ತಂಡಕ್ಕಾಗಿ ತಮ್ಮ ಮೊದಲ ಪಂದ್ಯವನ್ನು 1986 ರಲ್ಲಿ ಪುಣೆಯ ಪಿವೈಸಿ ಜಿಮ್ಖಾನಾದಲ್ಲಿ ಆಡಿದ್ದೆ ಎಂದು ಮಾಹಿತಿ ನೀಡಿದರು. ಜೊತೆಗೆ ಪಂದ್ಯದ ಆಸಕ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ.

ತಮ್ಮ ಶಾಲಾ ಸಹಪಾಠಿ ರಾಹುಲ್​ ಗನ್ಪುಲೆ ಬಗ್ಗೆಯೂ ಅವರು ಮಾತನಾಡಿದರು. “ನನಗಿಂತ ಸುಮಾರು ಎರಡು ವರ್ಷ ದೊಡ್ಡವನಾಗಿದ್ದ ರಾಹುಲ್​ ಜೊತೆ ನಾನ್​ ಸ್ಟ್ರೈಕರ್​ ಎಂಡ್​ ನಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದೆ. ಅವರು ವೇಗದ ಓಟಗಾರರೂ ಆಗಿದ್ದರು” ಎಂದು ಮಾಸ್ಟರ್​ ಬ್ಲಾಸ್ಟರ್​ ಹೇಳಿದ್ದಾರೆ.

ರಾಹುಲ್​ ಆಫ್​ ಡ್ರೈವ್​ ಹೊಡೆದು ಮೂರು ರನ್​ ಗಳಿಸಲು ಬಯಸಿದ್ದರು. ಆದರೆ, ನಾನು ಅಷ್ಟು ವೇಗಿ ಅಲ್ಲ ಎಂದು ಹೇಳಿಕೊಂಡು ರನ್​ ಔಟ್​ ಆದೆ. ಇದು ಅವರ ಮೊದಲ ಪಂದ್ಯವಾದ್ದರಿಂದ ತುಂಬಾ ನಿರಾಸೆಯಾಯಿತು. ಪೆವಿಲಿಯನ್​ಗೆ ಹೋಗುವ ದಾರಿಯಲ್ಲಿ ಅತ್ತಿದ್ದೆ ಎಂದು ಸಚಿನ್​ ಭಾವುಕರಾಗಿ ಹೇಳಿದ್ದಾರೆ.

ಆನ್​ಲೈನ್​ನಲ್ಲಿ ಹಂಚಿಕೊಂಡ ನಂತರ ವಿಡಿಯೊ 3 ಮಿಲಿಯನ್​ ವೀಕ್ಷಣೆ ಗಳಿಸಿದೆ. ಕ್ಲಿಪ್​ ಅನ್ನು ವೀಕ್ಷಿಸಿದ ನಂತರ ನೆಟ್ಟಿಗರು ಸಂತೋಷಪಟ್ಟಿದ್ದಾರೆ ಮತ್ತು ಕಾಮೆಂಟ್​ಗಳ ವಿಭಾಗದಲ್ಲಿ ಅವರನ್ನು ಪ್ರೀತಿ ಮತ್ತು ಪ್ರಶಂಸೆ ಮಳೆ ಸುರಿಸುತ್ತಿದ್ದಾರೆ.

35 ವರ್ಷಗಳ ನಂತರವೂ ನೀವು ಎಲ್ಲಾ ಹೆಸರುಗಳನ್ನು ನೆನಪಿಸಿಕೊಂಡಿರುವುದು ಅದ್ಭುತವಾಗಿದೆ” ಎಂದು ಒಬ್ಬರು ಕಾಮೆಂಟ್​ ಮಾಡಿದ್ದರೆ, ಇನ್ನೊಬ್ಬರು ನಿಜವಾದ ವ್ಯಕ್ತಿ ತನ್ನ ದುರ್ಬಲತೆಯನ್ನು ಹಂಚಿಕೊಳ್ಳಲು ಎಂದಿಗೂ ಹೆದರುವುದಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...