alex Certify ಸೆಲೆಬ್ರಿಟಿಯನ್ನು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡರೂ ಗೊತ್ತಿರಲಿಲ್ಲ ಹೆಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲೆಬ್ರಿಟಿಯನ್ನು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡರೂ ಗೊತ್ತಿರಲಿಲ್ಲ ಹೆಸರು…!

ನಮಗಿಷ್ಟವಾದ ನೆಚ್ಚಿನ ವ್ಯಕ್ತಿತ್ವವನ್ನು ಭೇಟಿಯಾದಾಗ ಶ್ರೇಷ್ಠ ಭಾವನೆ ಮೂಡುತ್ತದೆ. ಹೊಸ ಪ್ರಪಂಚದಲ್ಲಿರುವಂತೆ ಭಾಸವಾಗುತ್ತದೆ.

ಆದರೆ, ನಿಮ್ಮ ಹೆತ್ತವರು ಆ ವ್ಯಕ್ತಿತ್ವವನ್ನು ಭೇಟಿ ಮಾಡಿದರೆ ಮತ್ತು ಅವರನ್ನು ಗುರುತಿಸದಿದ್ದರೆ ನಿಮಗೆ ಹೇಗೆ ಅನಿಸಬಹುದು? ಇಲ್ಲಿ ಆಗಿದ್ದೂ ಅದೆ.

ನೋಯ್​ ಎಂಬ ಮಹಿಳೆಗೆ ಇದೇ ಅನುಭವವಾಗಿದೆ. ಆಕೆಯ ತಂದೆ ಹ್ಯಾರಿ ಸ್ಟೈಲ್ಸ್​ರನ್ನು ಭೇಟಿಯಾದ್ದು ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ತಮ್ಮ ಈ ಕತೆಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಕೆಯ ತಂದೆ ಸಾಕಷ್ಟು ಪ್ರಸಿದ್ಧ ವ್ಯಕ್ತಿಯನ್ನು ಭೇಟಿಯಾದೆ ಎಂದು ತಿಳಿಸಿದ್ದಾರೆ. ಅದು ಯಾರು ಎಂದು ಸಹಜವಾಗಿ ಆಕೆ ಕೇಳಿದ್ದಳು. ಅದಕ್ಕೆ ಆಕೆಯ ತಂದೆ, ತನಗೆ ಅವರ ಹೆಸರು ಗೊತ್ತಿಲ್ಲ ಆದರೆ ಫೋಟೋ ಕ್ಲಿಕ್ಕಿಸುವಲ್ಲಿ ಯಶಸ್ವಿಯಾದೆ ಎಂದು ಹೇಳಿ, ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೋಯ್​ ಗಾಬರಿ ಬಿದ್ದಿದ್ದಾರೆ. ಏಕೆಂದರೆ ಆಕೆಯ ತಂದೆ ನಿಂತಿರುವುದು ಹ್ಯಾರಿ ಸ್ಟೈಲ್ಸ್​ ಜೊತೆಯಾಗಿತ್ತು.

ಬ್ರಿಟಿಷ್​ ಗಾಯಕ ಮತ್ತು ಒನ್​ ಡೈರೆಕ್ಷನ್ ಮಾಜಿ ಸದಸ್ಯ ಹ್ಯಾರಿ ಸ್ಟೈಲ್ಸ್​ ನೋಯಿ ತಂದೆಯೊಂದಿಗೆ ಹೆಗಲ ಮೇಲೆ ಕೈಯಿಟ್ಟು ಪೋಸ್​ ನೀಡಿದ್ದರು. ತನ್ನ ತಂದೆಯೊಂದಿಗೆ ನಡೆಸಿದ ಸಂಭಾಷಣೆಯನ್ನು ನೋಯಿ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...