alex Certify ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಬಂದಿದ್ದ ಆರೋಪಿ ಯುವತಿಯೊಂದಿಗೆ ಲಾಡ್ಜ್ ನಲ್ಲಿ ಪತ್ತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಬಂದಿದ್ದ ಆರೋಪಿ ಯುವತಿಯೊಂದಿಗೆ ಲಾಡ್ಜ್ ನಲ್ಲಿ ಪತ್ತೆ…!

ಪೊಲೀಸ್ ಭದ್ರತೆಯಲ್ಲಿ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆ ತರಲಾಗಿದ್ದ ಕೊಲೆ ಆರೋಪಿಯೊಬ್ಬ ಯುವತಿಯೊಂದಿಗೆ ಖಾಸಗಿ ಸಮಯ ಕಳೆಯಲು ಲಾಡ್ಜ್ ಗೆ ತೆರಳಿದ್ದ ವೇಳೆ ದಾಳಿ ನಡೆಸಿರುವ ಹಿರಿಯ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಇಂಥದೊಂದು ಘಟನೆ ಧಾರವಾಡದಲ್ಲಿ ನಡೆದಿದ್ದು, ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಬಚ್ಚಾ ಖಾನ್ ಎಂಬಾತನನ್ನು ಬಳ್ಳಾರಿಯ ಕಾರಾಗೃಹದಲ್ಲಿ ಇರಿಸಲಾಗಿತ್ತು. ಶನಿವಾರದಂದು ಈತನನ್ನು ನ್ಯಾಯಾಲಯಕ್ಕೆ ವಿಚಾರಣೆಗಾಗಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಕರೆತರಲಾಗಿತ್ತು.

ಇದರ ಮಧ್ಯೆ ಈತ ಸತ್ತೂರಿನ ಲಾಡ್ಜ್ ಒಂದರಲ್ಲಿ ಯುವತಿಯೊಂದಿಗೆ ಖಾಸಗಿ ಸಮಯ ಕಳೆಯಲು ಹೋಗಿದ್ದು, ಇದಕ್ಕೆ ಆತನೊಂದಿಗೆ ಬಂದಿದ್ದ ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಈತ ಲಾಡ್ಜ್ ಕೋಣೆಗೆ ತೆರಳುವ ಮುನ್ನವೇ ಯುವತಿ ಅಲ್ಲಿದ್ದಳು ಎನ್ನಲಾಗಿದ್ದು, ಹಿರಿಯ ಅಧಿಕಾರಿಗಳು ತಮಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಈಗ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...