alex Certify ಮೊದಲ ಭಾರತೀಯ ಮಹಿಳಾ ಪೈಲಟ್​ಗೆ ಏವಿಯೇಷನ್​ ಮ್ಯೂಸಿಯಂನಲ್ಲಿ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಭಾರತೀಯ ಮಹಿಳಾ ಪೈಲಟ್​ಗೆ ಏವಿಯೇಷನ್​ ಮ್ಯೂಸಿಯಂನಲ್ಲಿ ಸ್ಥಾನ

ಬೋಯಿಂಗ್​-777 ವಿಮಾನದ ಹಿರಿಯ ಪೈಲಟ್​ ಕ್ಯಾಪ್ಟನ್​ ಜೋಯಾ ಅಗರ್ವಾಲ್​ ಅವರು ಉತ್ತರ ಧ್ರುವದ(ನಾರ್ಥ್​ಪೋಲ್​) ಮೇಲೆ ವಿಮಾನ ಹಾರಿಸಿದ ಮೊದಲ ಭಾರತೀಯ ಮಹಿಳಾ ಪೈಲಟ್​ ಆಗಿದ್ದು, ಸುಮಾರು 16,000 ಕಿಲೋಮೀಟರ್​ಗಳ ದಾಖಲೆಯ ಅಂತರವನ್ನು ಕ್ರಮಿಸಿದ್ದಾರೆ. ಈ ಕಾರಣಕ್ಕೆ ಅವರು ಎಸ್​ಎಫ್ಒ ಏವಿಯೇಷನ್​ ಮ್ಯೂಸಿಯಂನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

2021ರಲ್ಲಿ ಮೊದಲ ಬಾರಿಗೆ ಜೋಯಾ ಅಗರ್ವಾಲ್​ ನೇತೃತ್ವದ ಏರ್​ ಇಂಡಿಯಾದ ಮಹಿಳಾ ಪೈಲಟ್​ ತಂಡವು ಯುಎಸ್​ನ ಸ್ಯಾನ್​ ಫ್ರಾನ್ಸಿಸ್ಕೊನಿಂದ ಬೆಂಗಳೂರು ನಗರಕ್ಕೆ ಆಗಮಿಸುವ ಮೂಲಕ ವಿಶ್ವದ ಅತಿ ಉದ್ದದ ವಿಮಾನ ಮಾರ್ಗ ಕ್ರಮಿಸಿತ್ತು.

ಯುಎಸ್​ ಮೂಲದ ಏವಿಯೇಷನ್​ ಮ್ಯೂಸಿಯಂ, ಏರ್​ ಇಂಡಿಯಾದ ಮಹಿಳಾ ಪೈಲಟ್​ಗಳ ಸಾಧನೆಯಿಂದ ಪ್ರಭಾವಿತವಾಗಿದ್ದು, ಹೀಗಾಗಿ ತಮ್ಮ ಮ್ಯೂಸಿಯಂನಲ್ಲಿ ಸ್ಥಾನವನ್ನು ನೀಡಿದೆ. ನಾನು ಅಲ್ಲಿರುವ ಏಕೈಕ ಜೀವಂತ ವ್ಯಕ್ತಿ ಎಂದು ನೋಡಿ ಆಶ್ಚರ್ಯಚಕಿತಳಾದೆ, ನನ್ನನ್ನು ಗುರುತಿಸಿರುವುದಕ್ಕೆ ವಿನಮ್ರಳಾಗಿದ್ದೇನೆ. ನಾನು ಯುಎಸ್​ ನಲ್ಲಿರುವ ಪ್ರತಿಷ್ಠಿತ ವಾಯುಯಾನ ವಸ್ತುಸಂಗ್ರಹಾಲಯದ ಭಾಗವಾಗಿದ್ದೇನೆ ಎಂದು ನನಗೆ ನಂಬಲಾಗುತ್ತಿಲ್ಲ ಎಂದು ಕ್ಯಾಪ್ಟನ್​ ಜೋಯಾ ತಿಳಿಸಿದ್ದಾರೆ.

ಕ್ಯಾಪ್ಟನ್​ ಜೋಯಾ ಅಗರ್ವಾಲ್​ ಅವರು ಪ್ರಮಾಣಪತ್ರವನ್ನು ಸ್ವೀಕರಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ ಖುಷಿ ಹಂಚಿಕೊಂಡರು. ಅಮೇರಿಕಾದ ಮ್ಯೂಸಿಯಂನಲ್ಲಿರುವ ಮೊದಲ ಭಾರತೀಯ ಮಹಿಳೆ ನಾನೇ ಎಂದು ನಂಬಲು ಸಾಧ್ಯವಿಲ್ಲ, ಎಂಟು ವರ್ಷದ ಹುಡುಗಿ ಇದ್ದಾಗ ಮನೆ ಟೆರೇಸ್​ ಮೇಲೆ ಕುಳಿತು ನಕ್ಷತ್ರಗಳನ್ನು ನೋಡುತ್ತಾ ಮತ್ತು ಪೈಲಟ್​ ಆಗುವ ಕನಸು ಕಾಣುತ್ತಿದ್ದೆ. ಇಂದು ಅಮೇರಿಕಾ ತಮ್ಮ ಮ್ಯೂಸಿಯಂಗಾಗಿ ಭಾರತೀಯ ಮಹಿಳೆಯನ್ನು ಗುರುತಿಸಿರುವುದು ಗೌರವವಾಗಿದೆ. ಇದು ನನಗೆ ಮತ್ತು ನನ್ನ ದೇಶಕ್ಕೆ ಉತ್ತಮ ಕ್ಷಣವಾಗಿದೆ ಎಂದು ಕ್ಯಾಪ್ಟನ್​ ಜೋಯಾ ಹೇಳಿದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...