ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಮೊರಾದಾಬಾದ್ ಪೊಲೀಸರ ನಕಲಿ ಪೇಜ್ ಸೃಷ್ಟಿಸಿ ಫೇಸ್ ಬುಕ್ ನಲ್ಲಿ ಪಾಕಿಸ್ತಾನದ ಧ್ವಜ ಹಾಕಲಾಗಿದೆ. ಇದರಲ್ಲಿ ಆತ್ಮ ಪ್ರಕಾಶ್ ಪಂಡಿತ್ ಹೆಸರಿನ ಖಾತೆಯಿಂದ ಸಿಎಂ ಯೋಗಿಗೆ ಬೆದರಿಕೆ ಹಾಕಲಾಗಿದೆ.
ಈ ಬಗ್ಗೆ ತನಿಖೆ ನಡೆಸಲಾಗಿದೆ. ಮೊರಾದಾಬಾದ್ ಎಸ್ಪಿ ಅಖಿಲೇಶ್ ಬದುರಿಯಾ ಅವರು, ಸೈಬರ್ ಸೆಲ್ ತನಿಖೆಯ ನಂತರ ಆತ್ಮಪ್ರಕಾಶ್ ಎಂಬ ವ್ಯಕ್ತಿ ತಾನು ಫೇಸ್ ಬುಕ್ ಖಾತೆಯನ್ನು ರಚಿಸಿದ್ದು, ಅದನ್ನು ಸಮಾಜ ವಿರೋಧಿ ವಿಷಯವನ್ನು ಪೋಸ್ಟ್ ಮಾಡಲು ದುರುಪಯೋಗಪಡಿಸಿಕೊಳ್ಳಲಾಗಿದೆ. ಆತ್ಮಪ್ರಕಾಶ್ ಅವರ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಮೊರಾದಾಬಾದ್ ಪೊಲೀಸರ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ ಪೇಜ್ ರಚಿಸಲಾಗಿದೆ, ಅದರ ಮೂಲಕ ಆತ್ಮಪ್ರಕಾಶ್ ಪಂಡಿತ್ ಹೆಸರಿನ ಖಾತೆಯಿಂದ ಬೆದರಿಕೆ ಪೋಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.