ತುಮಕೂರು: ಧರ್ಮದ ವಿಚಾರಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರವಾಗಿ ತಿರುಗೇಟು ನೀಡಿರುವ ಸಚಿವ ಗೋವಿಂದ ಕಾರಜೋಳ, ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗ ಜ್ಞಾನೋದಯ ಆಗಿದೆ. ಧರ್ಮವನ್ನು ಒಡೆಯಲು ಯತ್ನಿಸಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಂದೆ ಈರೀತಿ ಮಾಡಲ್ಲ ಎಂದು ಹೇಳಿದ್ದಾರೆ. 75 ವರ್ಷಗಳ ನಂತರ ಮಠ ದೇಗುಲಗಳ ಬಗ್ಗೆ ಜ್ಞಾನೋದಯವಾಗಿದೆ. 75 ವರ್ಷಗಳ ಕಾಲ ತಿರಸ್ಕಾರದ ಮನೋಭಾವ ಹೊಂದಿದ್ದರು. ಈಗ ಮುಪ್ಪಿನ ಕಾಲಕ್ಕೆ ದೇಗುಲ, ಮಠಗಳಿಗೆ ಹೋಗುತ್ತಿದ್ದಾರೆ ಎಂದರು.
ಚುನಾವಣೆ ಸಮೀಪ ಬರುತ್ತಿದ್ದಂತೆ ಹೊಷ ವೇಷಧಾರಿಗಳಾಗುತ್ತಾರೆ. ಇದು ಚುನಾವಣೆ ಕಾಲ ಹಾಗಾಗಿ ಸಿದ್ದರಾಮಯ್ಯ ಮಠ, ಮಂದಿಗಳಿಗೆ ಭೇಟಿ ನೀಡುತ್ತಿರುವುದರಲ್ಲಿ ಅಚ್ಚರಿ ಇಲ್ಲ ಎಂದು ವ್ಯಂಗ್ಯವಾಡಿದರು.