ಆಕಸ್ಮಿಕವಾಗಿ ಡಿಲೀಟ್ ಆದ ಮೆಸೇಜ್ಗಳನ್ನು ರಿಕವರ್ ಮಾಡಿಕೊಳ್ಳಲು ಬಳಕೆದಾರರಿಗೆ ವಾಟ್ಸಾಪ್ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಭಾರತದ ಮಿಲಿಯನ್ಗಟ್ಟಲೆ ಬಳಕೆದಾರರಿಗೆ ಈ ಆಯ್ಕೆ ಅನುಕೂಲ ಮಾಡಿಕೊಡಲಿದೆ. ಭಾರತದಲ್ಲಿ ವಾಟ್ಸಾಪ್ ಬಹಳ ಜನಪ್ರಿಯವಾಗಿದ್ದು, ಸುಮಾರು 487 ಮಿಲಿಯನ್ ಬಳಕೆದಾರರನ್ನು ಹೊಂದಿದೆ.
ಮೆಸೇಜಿಂಗ್ ಪ್ಲಾಟ್ಫಾರ್ಮ್ನಲ್ಲಿ ಬಳಕೆದಾರರ ಸೆಕ್ಯೂರಿಟಿ ಹೆಚ್ಚಿಸಲು ವಾಟ್ಸಾಪ್ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ. ಡಿಲೀಟ್ ಆಗಿರೋ ಮೆಸೇಜ್ ಅನ್ನು ಕೆಲವೇ ಸೆಕೆಂಡ್ಗಳಲ್ಲಿ ಮರಳಿ ಪಡೆಯಲು ಹೊಸ ಬೀಟಾ ಅಪ್ಡೇಟ್ ಅನುವು ಮಾಡಿಕೊಡಲಿದೆ.
ಸದ್ಯ ಇದು ಪ್ರಾಯೋಗಿಕ ಹಂತದಲ್ಲಿದ್ದು, Android 2.22.18.13 ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಕೆಲ ದಿನಗಳಲ್ಲೇ ಹೊಸ ಅಪ್ಡೇಟ್ ಅನ್ನು ಎಲ್ಲರಿಗೂ ಲಭ್ಯವಾಗುವಂತೆ ಲಾಂಚ್ ಮಾಡಲಾಗುತ್ತದೆ. ಹೊಸ ಬೀಟಾ ಅಪ್ಡೇಟ್ನಲ್ಲಿ, ಮೆಸೇಜ್ ಡಿಲೀಟ್ ಮಾಡಿದಾಗಲೆಲ್ಲ ಸ್ನ್ಯಾಪ್ಬಾರ್ ಪಾಪ್ ಅಪ್ ಆಗುತ್ತದೆ, ಕ್ರಿಯೆಯನ್ನು ರದ್ದುಗೊಳಿಸುವ ಆಯ್ಕೆಯನ್ನು ಒದಗಿಸುತ್ತದೆ. ಆದಾಗ್ಯೂ, ನೀವು ಏನನ್ನೂ ಮಾಡದಿರಲು ನಿರ್ಧರಿಸಿದರೆ, ನಂತರ ಮೆಸೇಜ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಲಾಗುತ್ತದೆ.
ವಾಟ್ಸಪ್ ಗ್ರೂಪ್ ಅನ್ನು ಯಾರಾದರೂ ತೊರೆದರೆ ಗ್ರೂಪ್ನಲ್ಲಿರುವ ಪ್ರತಿಯೊಬ್ಬರಿಗೂ ನೋಟಿಫಿಕೇಶನ್ ಸಿಗುತ್ತಿತ್ತು. ಇದು ಗುಂಪು ತೊರೆದವರಿಗೆ ಕಿರಿಕಿರಿ ಉಂಟುಮಾಡಬಹುದು. ಇದೇ ಕಾರಣಕ್ಕೆ ಗ್ರೂಪ್ ಅಡ್ಮಿನ್ ಹೊರತುಪಡಿಸಿ ಇತರರಿಗೆ ತಿಳಿಯದಂತೆ ಗ್ರೂಪ್ ತೊರೆದು ಹೋಗಲು ವಾಟ್ಸಾಪ್ ಅನುವು ಮಾಡಿಕೊಟ್ಟಿದೆ. ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಈ ಅಪ್ಡೇಟ್ ಲಭ್ಯವಾಗಲಿದೆ.
ಬಳಕೆದಾರರು ಶಾಶ್ವತ ಡಿಜಿಟಲ್ ದಾಖಲೆಗಳನ್ನು ಹೊಂದುವುದನ್ನು ನಿಲ್ಲಿಸುವ ಸಲುವಾಗಿ, Whatsapp ‘ಒಮ್ಮೆ ವೀಕ್ಷಿಸಿ’ ಆಯ್ಕೆಯೊಂದಿಗೆ ಬಂದಿದೆ. ಇದರಲ್ಲಿ ಬಳಕೆದಾರರು ಮೆಸೇಜ್ಗಳನ್ನು ಮಾತ್ರ ನೋಡಬಹುದು. ಅವುಗಳನ್ನು ಡಿವೈಸ್ನಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಆದಾಗ್ಯೂ, ಬಳಕೆದಾರರು ಅದನ್ನು ಸೆರೆಹಿಡಿಯಲು ಸ್ಕ್ರೀನ್ಶಾಟ್ ಬಳಸುತ್ತಾರೆ. ಹಾಗಾಗಿ Whatsapp ಸ್ಕ್ರೀನ್ಶಾಟ್ ಆಯ್ಕೆಯನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಹಲವು ಬದಲಾವಣೆಗಳನ್ನು ವಾಟ್ಸಾಪ್ ಕಾರ್ಯರೂಪಕ್ಕೆ ತರುತ್ತಿದೆ.