alex Certify ಸ್ವಂತ ಸೂರು ಹೊಂದುವ ಕನಸು ಕಂಡ ಬಡವರಿಗೆ ‘ಬಿಬಿಎಂಪಿ’ ಯಿಂದ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಸೂರು ಹೊಂದುವ ಕನಸು ಕಂಡ ಬಡವರಿಗೆ ‘ಬಿಬಿಎಂಪಿ’ ಯಿಂದ ಗುಡ್ ನ್ಯೂಸ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವುದಿರಲಿ ಕಡಿಮೆ ಬೆಲೆಗೆ ಬಾಡಿಗೆ ಮನೆ ಸಿಗುವುದೂ ಸಹ ಕಷ್ಟ. ಇದೀಗ ಬೆಂಗಳೂರು ಮಹಾನಗರ ಪಾಲಿಕೆ ಬಡ ಜನರಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ಸಹಾಯ ಮಾಡಲು ಮುಂದಾಗಿದೆ.

ಹೌದು, ಕೊರೊನಾ ಕಾರಣಕ್ಕಾಗಿ ಸ್ಥಗಿತಗೊಂಡಿದ್ದ ಒಂಟಿ ಮನೆ ಯೋಜನೆಯನ್ನು ಮತ್ತೆ ಜಾರಿಗೆ ತರಲಾಗುತ್ತಿದ್ದು, ಈ ಯೋಜನೆ ಅಡಿಯಲ್ಲಿ ಮನೆ ಕಟ್ಟಿಕೊಳ್ಳುವವರಿಗೆ 5 ಲಕ್ಷ ರೂಪಾಯಿ ಆರ್ಥಿಕ ಸಹಾಯ ದೊರೆಯಲಿದೆ. ಇದಕ್ಕಾಗಿ ಕೆಲವೊಂದು ಫರತ್ತುಗಳನ್ನೂ ವಿಧಿಸಲಾಗಿದೆ.

ಫಲಾನುಭವಿಗಳಾಗುವರು ಕನಿಷ್ಠ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರಬೇಕು. ಅಲ್ಲದೆ ಅರ್ಜಿದಾರನು ಸ್ವಂತ ನಿವೇಶನ ಹೊಂದಿದ್ದು ಗರಿಷ್ಠ 600 ಅಡಿ ಜಾಗವಿರಬೇಕು. ವಾರ್ಷಿಕ ಆದಾಯ ಎಲ್ಲ ವರ್ಗದವರಿಗೂ 2.5 ಲಕ್ಷ ರೂಪಾಯಿಗಳಾಗಿದ್ದು, ಬೇರೆ ಇಲಾಖೆಗಳಿಂದ ಮನೆ ಕಟ್ಟಲು ಆರ್ಥಿಕ ನೆರವು ಪಡೆದಿರಬಾರದು ಎಂದು ತಿಳಿಸಲಾಗಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಯೋಜನೆಗೆ ಚಾಲನೆ ಸಿಕ್ಕ ಬಳಿಕ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...