ಆನೆ ಮರಿಯೊಂದು ದಿಬ್ಬದಿಂದ ಉರುಳಿಬಿದ್ದ ಹಾಸ್ಯಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಅದು ನಗು ತರಿಸಿದೆ.
ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಬ್ಯುಟೆಂಗೆಬೀಡೆನ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋ ಕೇವಲ 37 ಸೆಕೆಂಡ್ಗಳಷ್ಟಿದ್ದರೂ, 9.7 ಮಿಲಿಯನ್ ಜನರ ಹೃದಯವನ್ನು ಕದ್ದಿದೆ.
ವಿಡಿಯೊದಲ್ಲಿ, ತಾಯಿ ಆನೆ ತನ್ನ ಮರಿಯನ್ನು ಎತ್ತರದಿಂದ ಹೇಗೆ ಇಳಿಯಬೇಕೆಂದು ಕಲಿಸುತ್ತಿರುವುದು ಕಾಣಿಸುತ್ತದೆ. ತಾಯಿ ಮೊದಲು ತನ್ನ ಕಾಲುಗಳನ್ನು ಬಗ್ಗಿಸಿ ನಿಧಾನವಾಗಿ ಕೆಳಗಿಳಿಯುತ್ತದೆ, ತನ್ನ ಮರಿಗೆ ಅರ್ಥವಾಗುವಂತೆ ಪ್ರಕ್ರಿಯೆಯನ್ನು ನಿಧಾನವಾಗಿ ನಿರ್ವಹಿಸುತ್ತದೆ. ಆದರೆ, ಚಿಕ್ಕ ಮರಿಗೆ ಹೇಗೆ ಇಳಿಯಬೇಕು ಎಂದು ತಿಳಿಯುವುದೇ ಇಲ್ಲ. ತಾಯಿಯನ್ನು ಅನುಕರಿಸುವ ಮರಿ ತನ್ನ ಕಾಲುಗಳನ್ನು ಬಾಗಿಸುತ್ತದೆಯಾದರೂ ಭಯದಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ.
ಕಾಲುಗಳು ನೆಲವನ್ನು ಸ್ಪರ್ಶಿಸಿ ಪ್ರಯತ್ನ ಮಾಡಿ ವಿಫಲನಾಗುತ್ತದೆ. ಮುಂದೆ, ಕೆಳಗೆ ಇಳಿಯಲು ತನ್ನದೇ ಮಾರ್ಗವನ್ನು ರೂಪಿಸಿದ್ದು ಮತ್ತು ಅದು ತುಂಬಾ ವಿಶಿಷ್ಟವಾಗಿತ್ತು. ಪುಟ್ಟ ಮರಿ ದಿಬ್ಬದಿಂದ ಕೆಳಗೆ ಉರುಳಿದೆ. ಇದರ ಚಟುವಟಿಕೆಯನ್ನು ಗಮನಿಸಿದ ಆನೆಗಳ ಹಿಂಡು ಅಚ್ಚರಿಗೊಂಡಿದ್ದು, ಈ ವಿಡಿಯೋ ಕಂಡ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದು, ಒಬ್ಬರು ಆತ್ಮ ನಿರ್ಭರ್ ಎಂದಿದ್ದಾರೆ.