
ಇದೀಗ ಯುಎಫ್‌ಒ ಅತ್ಯಂತ ಸ್ಪಷ್ಟವಾದ ಫೋಟೋ ಎಂದು ಹೆಸರಿಸಲಾದ ಛಾಯಾಚಿತ್ರವು ಬಿಡುಗಡೆಯಾದ 30 ವರ್ಷಗಳ ನಂತರ ಮತ್ತೆ ಮುನ್ನೆಲೆಗೆ ಬಂದಿದೆ. ಕ್ಯಾಲ್ವೈನ್ ಫೋಟೋಗ್ರಾಫ್ ಎಂದು ಹೆಸರಿಸಲಾದ ಚಿತ್ರದಲ್ಲಿ ವಜ್ರದ ಆಕಾರದ ವಸ್ತುವು ಅದರ ಹಿನ್ನೆಲೆಯಲ್ಲಿ ಮತ್ತೊಂದು ವಿಮಾನದೊಂದಿಗೆ ಹಾರುತ್ತಿರುವುದನ್ನು ತೋರಿಸುತ್ತದೆ. ವರದಿಗಳ ಪ್ರಕಾರ ಶೈಕ್ಷಣಿಕ ಸಂಶೋಧಕ ಮತ್ತು ಪತ್ರಕರ್ತ ಡಾ. ಡೇವಿಡ್ ಕ್ಲಾರ್ಕ್ ಫೋಟೋವನ್ನು ಬಹಿರಂಗಪಡಿಸಿದ್ದಾರೆ.
ಸ್ಕಾಟ್ಲೆಂಡ್ನ ಕ್ಯಾಲ್ವಿನ್ ಬಳಿಯ ಬೆಟ್ಟದ ಮೇಲೆ ಇಂದಿಗೂ ಅಪರಿಚಿತರಾಗಿರುವ ಇಬ್ಬರು ಈ ಛಾಯಾಚಿತ್ರವನ್ನು ತೆಗೆದಿದ್ದಾರೆ. ಫೋಟೋವನ್ನು ಕ್ಲಿಕ್ ಮಾಡಿದವರು ಸ್ಕಾಟ್ಲೆಂಡ್ನ ಡೈಲಿ ರೆಕಾರ್ಡ್ ಪತ್ರಿಕೆಗೆ ಸಲ್ಲಿಸಿದರು, ನಂತರ ಅದು ರಕ್ಷಣಾ ಸಚಿವಾಲಯಕ್ಕೆ ತಲುಪಿತ್ತು. ಆದರೆ ಫೋಟೋ ಪ್ರಕಟವಾಗಲಿಲ್ಲ ಹೀಗಾಗಿ ಸಾರ್ವಜನಿಕರ ಕಣ್ಣಿಗೆ ಬೀಳಲಿಲ್ಲ. ಬಳಿಕ ಅಧ್ಯಯನಕ್ಕೆ ಶೆಫೀಲ್ಡ್ ಹಾಲಂ ವಿಶ್ವವಿದ್ಯಾಲಯಕ್ಕೆ ಸಲ್ಲಿಕೆಯಾಗಿತ್ತು.
ಕ್ಯಾಲ್ವಿನ್ ಛಾಯಾಚಿತ್ರವನ್ನು ಪೂರ್ಣ ಪಝಲ್ನಲ್ಲಿ ಅತೀ ಪ್ರಮುಖ ದಾಖಲೆ ಆದರೂ, ಅದರ ಸುತ್ತಲಿನ ನಿಗೂಢತೆಗೆ ಇನ್ನೂ ಉತ್ತರವಾಗಿಲ್ಲ. ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ಪೂರ್ಣ ಪ್ರಮಾಣದ ವೈಜ್ಞಾನಿಕ ಅಧ್ಯಯನವನ್ನು ಪ್ರಾರಂಭಿಸುವುದಾಗಿ ಘೋಷಿಸಿತು. 15-17 ಜನರನ್ನು ಒಳಗೊಂಡ ತಂಡವು ಆಗಸ್ಟ್ನಲ್ಲಿ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು.