alex Certify ಸಂಭೋಗಕ್ಕಿಂತ ಮೊದಲು ಮೂತ್ರ ವಿಸರ್ಜನೆ ಅಪಾಯಕ್ಕೆ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಭೋಗಕ್ಕಿಂತ ಮೊದಲು ಮೂತ್ರ ವಿಸರ್ಜನೆ ಅಪಾಯಕ್ಕೆ ಕಾರಣ

ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಹಾಗೂ ನಂತ್ರ ಬಾತ್ ರೂಂಗೆ ಹೋಗುವುದು ಬಹುತೇಕ ಮಹಿಳೆಯರ ಅಭ್ಯಾಸ. ಇದ್ರಿಂದ ಲೈಂಗಿಕ ರೋಗ ಹರಡುವುದಿಲ್ಲ ಎಂದು ನಂಬಲಾಗಿದೆ. ಆದ್ರೆ ತಜ್ಞರು ಮಾತ್ರ ಮಹಿಳೆಯರ ನಂಬಿಕೆ ತಪ್ಪು ಎನ್ನುತ್ತಿದ್ದಾರೆ.

ತಜ್ಞರ ಪ್ರಕಾರ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಶೌಚಾಲಯಕ್ಕೆ ಹೋಗುವುದ್ರಿಂದ ಲೈಂಗಿಕ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆಯಂತೆ. ಮೂತ್ರಾಶಯಕ್ಕೆ ಸಂಬಂಧಿಸಿ ರೋಗ ಕಾಡಬಹುದೆಂದು ತಜ್ಞರು ಹೇಳಿದ್ದಾರೆ. ನ್ಯೂಯಾರ್ಕ್ ಸಿಟಿಯ ನರಶಾಸ್ತ್ರಜ್ಞ ಡೇವಿಡ್ ಕೌಫ್ಮನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಶಾರೀರಿಕ ಸಂಬಂಧದ ನಂತ್ರ ಶೌಚಾಲಯಕ್ಕೆ ಹೋಗುವುದು ಒಳ್ಳೆಯ ಸಂಗತಿ. ಆದ್ರೆ ಸಂಬಂಧ ಬೆಳೆಸುವ ಮುನ್ನ ಶೌಚಾಲಯಕ್ಕೆ ಹೋದಲ್ಲಿ ಸೋಂಕಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ ಎಂದು ಡೇವಿಡ್ ಹೇಳಿದ್ದಾರೆ. ಶಾರೀರಿಕ ಸಂಬಂಧ ಬೆಳೆಸುವ ಮೊದಲು ಮೂತ್ರ ಮಾಡದೆ ಸಂಬಂಧ ಬೆಳೆಸಬೇಕು. ಸಂಭೋಗದ ನಂತ್ರ ಒಂದೇ ಬಾರಿ ಎಲ್ಲ ಮೂತ್ರವನ್ನು ಹೊರಗೆ ಬಿಡಬೇಕು. ಮೂತ್ರಾಶಯದಲ್ಲಿ ಹೆಚ್ಚಿನ ಪ್ರಮಾಣದ ಮೂತ್ರ ಇರುವುದ್ರಿಂದ ವೇಗವಾಗಿ ಅದು ಹೊರಗೆ ಬರುವ ಮೂಲಕ ಮೂತ್ರಾಶಯಕ್ಕೆ ಸೇರಿದ್ದ ಬ್ಯಾಕ್ಟೀರಿಯಾವನ್ನು ಹೊರಗೆ ಬಿಡುತ್ತದೆ.

ಒಂದು ವೇಳೆ ಮೂತ್ರ ಮಾಡಿ ಸಂಬಂಧ ಬೆಳೆಸಿದಲ್ಲಿ ಸಂಬಂಧದ ನಂತ್ರ ಮೂತ್ರ ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ. ಇದ್ರಿಂದ ಮೂತ್ರ ನಿಧಾನವಾಗಿ ಹೊರಗೆ ಬರುತ್ತದೆ. ಹೀಗೆ ಬಂದಾಗ ಮೂತ್ರಾಶಯಕ್ಕೆ ಸೇರಿರುವ ಬ್ಯಾಕ್ಟೀರಿಯಾ ಸರಿಯಾಗಿ ಹೊರಗೆ ಬರದೆ ಸೋಂಕು ಕಾಡುತ್ತದೆ. ಹಾಗೆ ಸೆಕ್ಸ್ ಗಿಂತ ಮೊದಲು ಮೂತ್ರ ಮಾಡಿದಾಗ ಅಲ್ಲಿ ಉಳಿದಿರುವ ಬ್ಯಾಕ್ಟೀರಿಯಾ ಸೆಕ್ಸ್ ವೇಳೆ ಮೂತ್ರಾಶಯ ಸೇರುತ್ತದೆ. ಅದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...