ಸೆಲೆಬ್ರಿಟಿಗಳ ಸಣ್ಣ ನಡೆಗಳೂ ಸಾಮಾಜಿಕ ಜಾಲತಾಣದಲ್ಲಿ ವಾರಗಟ್ಟಲೆ ಚರ್ಚೆಯಾಗುತ್ತದೆ, ನೆಟ್ಟಿಗರು ಬಹಳ ಕುತೂಹಲದಿಂದ ಈ ಬೆಳವಣಿಗೆ ಗಮನಿಸುತ್ತಾ, ಕಾಮೆಂಟ್ ಮಾಡುತ್ತಿರುತ್ತಾರೆ.
ಇದೀಗ ಈ ಚರ್ಚೆಗೆ ಆಹಾರ ಆಗಿರುವುದು ಧನಶ್ರೀ ವರ್ಮಾ- ಚಹಲ್ ಜೋಡಿ. ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ರಹಸ್ಯವಾದಂತಹ ಕಾಮೆಂಟ್ ಹಂಚಿಕೊಂಡಿದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಟ್ರೆಂಡ್ ಆಗಿದ್ದಾರೆ.
ಧನಶ್ರೀ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ತನ್ನ ಹೆಸರಿನಿಂದ ‘ಚಹಲ್’ ಅನ್ನು ಕೈಬಿಟ್ಟಿದ್ದು, ಇದು ದಂಪತಿಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಜಾಲತಾಣ ನಂಬುವಂತೆ ಮಾಡಿತ್ತು. ಈ ಮಧ್ಯೆ ಧನಶ್ರೀ ತಮ್ಮ ಚಿತ್ರಗಳ ಸೆಟ್ ಅನ್ನು ಹಂಚಿಕೊಂಡು “ರಾಜಕುಮಾರಿ ಯಾವಾಗಲೂ ತನ್ನ ನೋವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತಾಳೆ” ಎಂದು ಬರೆದುಕೊಂಡಿದ್ದರು.
ಇದೀಗ ಈ ಪೋಸ್ಟ್ಗಳು ಅಭಿಮಾನಿಗಳಲ್ಲಿ ಸಾಕಷ್ಟು ಹುಬ್ಬೇರಿಸುವಂತೆ ಮಾಡಿದೆ. ದಂಪತಿ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ಗಳಲ್ಲಿ ಅಂತಹ ಕಾಮೆಂಟ್ಗಳನ್ನು ಅಪ್ಲೋಡ್ ಮಾಡಲು ಕಾರಣ ಏನಿರಬಹುದು ಎಂಬ ಚಿಂತೆ ನೆಟ್ಟಿಗರದ್ದಾಗಿದೆ.
“ನಿಮ್ಮ ಮತ್ತು ಯುಜಿ ಭಯ್ಯಾ ಅವರೊಂದಿಗೆ ಏನು ನಡೆಯುತ್ತಿದೆ ? ಎಂದು ಒಬ್ಬ ಜಾಲತಾಣಿಗರೂ ವಿಚಾರಿಸಿದರೆ, ಯುಜುವೇಂದ್ರಗೆ ಏನಾಯಿತು ಅವರು ಹೊಸ ಜೀವನದ ಬಗ್ಗೆ ಏಕೆ ಸ್ಟೇಟಸ್ ಹಾಕುತ್ತಿದ್ದಾರೆ ?” ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.