ಲಾಟರಿಯಲ್ಲಿ ಹಣವನ್ನು ಗೆಲ್ಲುವುದು ಅನೇಕರು ಕನಸು ಕಾಣುವ ವಿಷಯ, ನಮ್ಮಲ್ಲಿ ಹೆಚ್ಚಿನವರು ಹಣ ಗೆದ್ದರೆ ಏನು ಮಾಡುತ್ತೇವೆ ಎಂಬುದರ ಪಟ್ಟಿಗಳನ್ನು ಹೊಂದಿರುತ್ತೇವೆ, ಆದರೆ ಈ ದಂಪತಿಗಳು ಆ ಕನಸುಗಳನ್ನು ನನಸಾಗಿಸಿದಂತಿದೆ.
ಯುಎಸ್ನ ದಂಪತಿ ಲಾಟರಿ ವ್ಯವಸ್ಥೆಯಲ್ಲಿನ ಲೋಪದೋಷವನ್ನು ಕಂಡುಕೊಂಡು, ಹಲವು ಬಾರಿ ಲಾಟರಿಗಳಲ್ಲಿ ಒಟ್ಟು 26 ಮಿಲಿಯನ್ (ಅಂದಾಜು ರೂ 2.6 ಕೋಟಿ) ಗೆದ್ದಿದ್ದಾರೆ.
83 ವರ್ಷದ ಜೆರಿರ್ ಮತ್ತು ಮಿಚಿಗನ್ ಮತ್ತು ಅವರ ಪತ್ನಿ ಮಾರ್ಗ್ ಸೆಲ್ಬೀ ಈ ಹಣದಲ್ಲಿ ತಮ್ಮ ಮನೆಯನ್ನು ನವೀಕರಿಸಿದ್ದು, ಹೆಚ್ಚುವರಿ ಹಣವನ್ನು ತಮ್ಮ ಮೊಮ್ಮಕ್ಕಳ ಶಿಕ್ಷಣಕ್ಕೆ ಬಳಸಿದರು.
ವರದಿಗಳ ಪ್ರಕಾರ ವಿನ್ಫಾಲ್ ಲಾಟರಿ ಸಾಕಷ್ಟು ಮಹತ್ವದ ಲೋಪದೋಷ ಹೊಂದಿದೆ ಎಂದು ಜೆರಿರ್ ಕಂಡುಕೊಂಡರು. ಯಾರಿಗೂ ನಿಗದಿತ ಆರು ಸಂಖ್ಯೆ ಬಾರದೇ ಇದ್ದರೆ ಜಾಕ್ ಪಾಟ್ ಹಾಗೇ ಉಳಿದುಬಿಡುತ್ತದೆ. ಆ ಸಮಯದಲ್ಲಿ, ಯಾರೂ ತಮ್ಮ ಟಿಕೆಟ್ನಲ್ಲಿ ಎಲ್ಲಾ ಆರು ಸಂಖ್ಯೆಗಳನ್ನು ಹೊಂದಿರದಿದ್ದರೆ ಅಂಕಿಗಳ ಬಹುಪಾಲು ಹೊಂದಿಕೆಯಾದ ಬೆರಳೆಣಿಕೆಯಷ್ಟು ಕಡಿಮೆ ವಿಜೇತರಿಗೆ ಹಂಚಲಾಗುತ್ತದೆ.
ಅವರ ಈ ಕಥೆ ಈಗ ಬೆಳ್ಳಿತೆರೆಯಲ್ಲಿ ಮೂಡಿಬರುತ್ತಿದೆ. “ಜೆರಿರ್ ಮತ್ತು ಮಾರ್ಗ್ ಗೋ ಲಾರ್ಜ್” ಎಂಬ ಶೀರ್ಷಿಕೆಯಲ್ಲಿ ಚಲನಚಿತ್ರವು ತೆರೆ ಮೇಲೆ ಬರುತ್ತಿದ್ದು, ಬ್ರಿಯಾನ್ ಕ್ರಾನ್ಸ್ಟನ್ ಮತ್ತು ಆನೆಟ್ ಬೆನಿಂಗ್ ನಟಿಸಿದ್ದಾರೆ.