ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬೆಂಗಾವಲು ವಾಹನ ಚಾಲಕರಾಗಿದ್ದ ತಿರುಮಲೇಶ್ ವಿಧಿವಶರಾಗಿದ್ದಾರೆ.
ಗುರುವಾರ ಸಂಜೆ ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದ ಅವರಿಗೆ ರಾತ್ರಿ ಹೃದಯಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ತಿರುಮಲೇಶ್ ಕಳೆದ 16 ವರ್ಷಗಳಿಂದಲೂ ಯಡಿಯೂರಪ್ಪನವರ ಬೆಂಗಾವಲು ಪಡೆ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಿರುಮಲೇಶ್ ಅವರ ನಿಧನಕ್ಕೆ ಯಡಿಯೂರಪ್ಪನವರು ಸಂತಾಪ ಸೂಚಿಸಿದ್ದಾರೆ.