ರಾಜ್ಯದಲ್ಲಿ ಇತ್ತೀಚೆಗೆ ಅಡಿಕೆ ಬೆಳೆಯುವ ಪ್ರದೇಶ ವ್ಯಾಪಕವಾಗತೊಡಗಿದೆ. ಬಹಳಷ್ಟು ರೈತರು ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಈಗ ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಇದರ ಮಧ್ಯೆ ಅಡಿಕೆಗೆ ಕೊಳೆ ರೋಗವು ಸಹ ಕಾಡತೊಡಗಿದೆ.
ಹೀಗಾಗಿ ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೋ ತಯಾರಿಕೆಯ ಮೈಲುತುತ್ತ ಬಳಸಲಾಗುತ್ತಿದ್ದು, ರಾಜ್ಯ ಸರ್ಕಾರ ಮೈಲುತುತ್ತಕ್ಕೆ ಶೇಕಡ 75ರಷ್ಟು ಸಬ್ಸಿಡಿ ನೀಡುತ್ತಿತ್ತು. ಓರ್ವ ರೈತನಿಗೆ ಒಂದು ಹೆಕ್ಟೇರ್ ವರೆಗೆ 10 ಕೆಜಿ ಮೈಲುತುತ್ತಕ್ಕೆ ಸಬ್ಸಿಡಿ ದೊರೆಯುತ್ತಿತ್ತು.
ಆದರೆ ರಾಜ್ಯ ಸರ್ಕಾರ ಈ ಸಬ್ಸಿಡಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಹೇಳಲಾಗಿದೆ. ಒಂದೊಮ್ಮೆ ಅನುದಾನ ಬಿಡುಗಡೆ ಮಾಡಿದರೂ ಸಹ ಅದು ಅತ್ಯಂತ ಕಡಿಮೆಯಾಗಿದ್ದು ಹೀಗಾಗಿ ಬಹಳಷ್ಟು ರೈತರಿಗೆ ಸಹಾಯಧನ ಲಭ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಸಹಾಯಧನ ಬಿಡುಗಡೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.