alex Certify ನೂರಾರು ರೋಗಗಳಿಗೆ ಮದ್ದು ʼನುಗ್ಗೆಕಾಯಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂರಾರು ರೋಗಗಳಿಗೆ ಮದ್ದು ʼನುಗ್ಗೆಕಾಯಿʼ

ನುಗ್ಗೆಕಾಯಿ ಸಾಂಬಾರನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಕೇವಲ ರುಚಿಯಿಂದ ಅಷ್ಟೇ ಅಲ್ಲ, ಔಷಧೀಯ ಗುಣದಿಂದಲೂ ನುಗ್ಗೆಕಾಯಿ ಸಾಕಷ್ಟು ಬೇಡಿಕೆಯ ಪದಾರ್ಥವಾಗಿದೆ.

ಆರೋಗ್ಯದಾಯಕವಾದ ಸಾಕಷ್ಟು ಪೋಷಕಾಂಶ, ಖನಿಜ, ಪ್ರೋಟೀನ್ ಗಳ ಆಗರವಾಗಿದೆ. ನುಗ್ಗಿಕಾಯಿ ಅಷ್ಟೇ ಅಲ್ಲದೆ ಇದರ ಸೊಪ್ಪು, ಹೂವು, ಬೀಜಗಳು ಸಹ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು ಅದರ ಉಪಯೋಗಗಳು ಇಲ್ಲಿವೆ.

* ನುಗ್ಗೆಯ ಎಲೆ ಹಾಗೂ ಬೀಜದಲ್ಲಿ ರಕ್ತವನ್ನು ಶುದ್ಧೀಕರಿಸುವ ಗುಣಗಳಿದ್ದು, ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುವ ಕಾರ್ಯದಲ್ಲಿ ನೆರವಾಗುತ್ತದೆ.

* ನುಗ್ಗೆಕಾಯಿಯ ಸೇವನೆಯು ದೇಹದಲ್ಲಿನ ರೋಗ ನಿರೋಧಕತೆಯನ್ನು ಹೆಚ್ಚಿಸಿ ಸೋಂಕು ರೋಗಗಳಿಂದ ರಕ್ಷಣೆ ನೀಡುತ್ತದೆ.

* ನುಗ್ಗೆಯಲ್ಲಿ ವಿಟಮಿನ್ ಸಿ ಅಧಿಕವಾಗಿರುವ ಕಾರಣ ಸಾಮಾನ್ಯವಾಗಿ ಕಾಣಬಹುದಾದ ಗಂಟಲುಬೇನೆ, ಗಂಟಲು ಕೆರೆತ, ಶೀತದಂತಹ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

* ನುಗ್ಗೆಯ ಎಲೆಗಳನ್ನು ಅರೆದು ಸ್ವಲ್ಪ ಜೇನಿನೊಡನೆ ಮಿಶ್ರಣ ಮಾಡಿ ಎಳನೀರಿನೊಡನೆ ಸೇವಿಸುವುದನ್ನು ರೂಡಿಸಿಕೊಂಡರೆ ಹೊಟ್ಟೆ ಉರಿ, ಅತಿಸಾರ ಮೊದಲಾದ ರೋಗಗಳನ್ನು ತಡೆಗಟ್ಟಬಹುದು.

* ನುಗ್ಗೆಯು ಚರ್ಮದ ಸೋಂಕುಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ ಅಲ್ಲದೇ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...